
April 6 ಬಿಜೆಪಿ ಸ್ಥಾಪನಾ ದಿನವನ್ನು ಬಿಜೆಪಿ ಕಛೇರಿಯಲ್ಲಿ ಆಚರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವಾ ವಹಿಸಿದ್ದರು.ದ.ಕನ್ನಡ ಬಿಜೆಪಿ ಉಪಾಧ್ಯಕ್ಷರು ಪುತ್ತೂರು ಬಿಜೆಪಿ ಪ್ರಭಾರಿ ಸುನೀಲ್ ಆಳ್ವಾ ಮಾತಾನಾಡಿ ಜನಸಂಘದ ಹಿರಿಯರ ತ್ಯಾಗ ಬಲಿದಾನ ಮತ್ತು 1980ರ ನಂತರ ಬಿಜೆಪಿಯ ಏಳುಬೀಳುಗಳ ಬಗ್ಗೆ ಮಾಹಿತಿ ನೀಡಿದರು,ಚುನಾವಣಾ ಪ್ರಭಾರಿ ಸುಲೋಚನಾ ಜಿ.ಕೆ ಭಟ್,ನಗರ ಮಂಡಲ ಅಧ್ಯಕ್ಷರಾದ ಪಿ.ಜಿ ಜಗನ್ನೀವಾಸ್ ರಾವ್,ಬಿಜೆಪಿ ಪ್ರಮುಖ್ ಅರುಣ್ ಕುಮಾರ್ ಪುತ್ತಿಲ,ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ,ಜಯಶ್ರೀ ಶೆಟ್ಟಿ,ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕರಾದ ಉಮೇಶ್ ಕೋಡಿಬೈಲ್,ಪ್ರಸನ್ನ ಮಾರ್ತ,ಸಂತೋಷ್ ಕೈಕಾರ,ಸುರೇಶ್ ಕಣ್ಣರಾಯ,ಅನಿಲ್ ತೆಂಕಿಲ,ಸೀತರಾಮ ರೈ,ಗಣೇಶ್,ಗೋವರ್ಧನ್,ಮಣಿಕಂಠ ಮೊದಲಾದವರು ಉಪಸ್ಥಿತರಿದ್ದರು.


