
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ-ನಿರ್ದೇಶಕರು ಹಾಗೂ ಮುಂಬೈಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಸಿ. ಎಂ. ಡಿ. ಶ್ರೀ ತೋನ್ಸೆ ಆನಂದ್ ಎಂ. ಶೆಟ್ಟಿಯವರ ಮಂಗಳೂರಿನ “ಶಶಿ ಮಹಲ್”ನ ಗೃಹಪ್ರವೇಶದ ಸಂಭ್ರಮದಲ್ಲಿ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಭಾಗವಹಿಸಿ ಶ್ರೀ ತೋನ್ಸೆ ಆನಂದ್ ಎಂ.ಶೆಟ್ಟಿ ಮತ್ತು ಶ್ರೀಮತಿ ಶಶಿರೇಖಾ ಆನಂದ್ ಶೆಟ್ಟಿಯವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಮಹಾದಾನಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಪೋಷಕರಾದ ಶ್ರೀ ವಿವೇಕ್ ಶೆಟ್ಟಿ,ಶ್ರೀ ಶ್ರೀನಾಗೇಶ್ ಹೆಗ್ಡೆ,ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ,ಕೋಶಾಧಿಕಾರಿ ಶ್ರೀ ಊಳ್ತುರು ಮೋಹನದಾಸ್ ಶೆಟ್ಟಿ,ಶ್ರೀ ಮನಮೋಹನ್ ಶೆಟ್ಟಿ ಮುಂಬೈ, ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಶ್ರೀಮತಿ ಲತಾ ಕರ್ನಿರೆ ವಿಶ್ವನಾಥ್ ಶೆಟ್ಟಿ,ಒಕ್ಕೂಟದ ಮಾಜಿ ಕೋಶಾಧಿಕಾರಿ ಶ್ರೀ ಕೊಲ್ಲಾಡಿ ಬಾಲಕೃಷ್ಣ ರೈ,ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
