ಉಳ್ಳಾಲ: ಸಮುದ್ರ ಅಲೆಯ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತ್ಯು

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮುದ್ರ ಅಲೆಯ ಸೆಳೆತಕ್ಕೆ ಸಿಲುಕಿ ಚಿಕ್ಕಮಗಳೂರು ಮೂಲದ ಇಬ್ಬರು ಮೃತಪಟ್ಟ ಘಟನೆ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಶುಕ್ರವಾರ ನಡೆದಿದೆ. ಉಳ್ಳಾಲ ದರ್ಗಾ ಸಂದರ್ಶನಗೈಯ್ಯಲು ಬಂದಿದ್ದ ಚಿಕ್ಕಮಗಳೂರು ಮೂಲದ ಮೂವರು ಯುವಕರು ಸಮುದ್ರಪಾಲಾಗುತ್ತಿದ್ದು, ಈ ಪೈಕಿ ಓರ್ವನನ್ನು ರಕ್ಷಿಸಲಾಗಿದೆ. 

ಚಿಕ್ಕಮಗಳೂರು ನಿವಾಸಿಗಳಾದ ಬಶೀರ್ (23), ಸಲ್ಮಾನ್ (19), ಸೈಫ್ ಆಲಿ (27) ಎಂಬವರು ಉಳ್ಳಾಲ ದರ್ಗಾ ಸಂದರ್ಶನಕ್ಕೆಂದು ಬಂದವರು ಉಳ್ಳಾಲದ ಸಮುದ್ರ ತೀರಕ್ಕೆ ತೆರಳಿದ್ದಾರೆ.ಅಲ್ಲಿ ಸಮುದ್ರದ ನೀರಲ್ಲಿ ಆಟವಾಡುತ್ತಿದ್ದ ಸಂದರ್ಭ ಮೂವರು ಅಲೆಗಳ ನಡುವೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ತಕ್ಷಣ ಸ್ಥಳದಲ್ಲಿದ್ದ ಮೊಗವೀರ ಜೀವರಕ್ಷಕ ಸದಸ್ಯರು ಸಮುದ್ರಕ್ಕೆ ಧುಮುಕಿ ಸೈಫ್ ಆಲಿ ಮತ್ತು ಸಲ್ಮಾನ್ ಇಬ್ಬರನ್ನು ಮೇಲಕ್ಕೆತ್ತಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ಬಶೀರ್ ಅವರು ಇನ್ನೂ ಸಮುದ್ರದಲ್ಲಿ ಪತ್ತೆಯಾಗಿಲ್ಲ. 

ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *