ಪುತ್ತೂರು ಬಸ್‌ಸ್ಟಾಪ್‌ನಲ್ಲಿ ಚೂರಿ ಇರಿತ.

ಬೆಳಗಾಂ ಜಿಲ್ಲೆಯಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನಿಗೆ ಇನ್ನೋರ್ವ ಕೂಲಿ ಕಾರ್ಮಿಕ ಚೂರಿಯಿಂದ ಇರಿದ ಘಟನೆಯೊಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆ ಮಾ.25 (ನಿನ್ನೆ) ನಡೆದಿದೆ.

ಬೆಳಗಾಂ ಜಿಲ್ಲೆಯ ಗೋಕಾಕ್‌ ತಾಲೂಕ್‌ ಮಲ್ಲಪುರ ನಿವಾಸಿ ಆನಂದ ಬಂದಾವಿ (35) ಎಂಬಾತನೇ ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಇವರು ತನ್ನ ಪರಿಚಯದ ಅವಿನಾಶ್‌ ಎಂಬಾತನೇ ಆರೋಪಿ. ಮಾ.25 ರಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಆನಂದ್ ಬೆಳಗಾಂನಿಂದ ಪುತ್ತೂರಿಗೆ ಬಂದಿದ್ದಾರೆ.

ಅಲ್ಲಿ ಅವರಿಗೆ ಅವಿನಾಶ್‌, ನಾರಾಯಣ, ದುರ್ಗೇಶ್‌, ಹರೀಶ್‌ ಎಂಬ ಪರಿಚಯದವರು ಬಸ್‌ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರ ಜೊತೆ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಆರೋಪಿ ಅವಿನಾಶ್‌ ಏಕಾಏಕಿ ಬಂದು ಆನಂದ್‌ ಬಂದಾವಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡುತ್ತಾನೆ. ಅನಂತರ ಆನಂದ್‌ ಅವರು ಅಲ್ಲಿಂದ ತೆರಳಿದ್ದು, ಸ್ವಲ್ಪ ದೂರ ನಿಂತಿದ್ದಾರೆ. ಅಲ್ಲಿಗೆ ಕೂಡಾ ಬಂದ ಅವಿನಾಶ್‌ ಕೊಲೆ ಮಾಡುವುದಾಗಿ ಹೇಳಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ

ಕೂಡಲೇ ಇತರರು ಬರುವುದನ್ನು ಕಂಡು ಆರೋಪಿ ಅಲ್ಲಿಂದ ತೆರಳಿದ್ದಾನೆ. ಆನಂದ್‌ ಅವರನ್ನು ಚಿಕಿತ್ಸೆಗೆಂದು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆನಂದ್‌ ನೀಡಿದ ದೂರಿನನ್ವಯ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?