ಶಿವಕುಮಾರ್‌ ಬಿಜೆಪಿಗೆ ಬರೋಕೆ ರೆಡಿ ಇದಾರೆ: ಶಾಸಕ ಮುನಿರತ್ನ

ಶಿವಕುಮಾರ್‌ ಬಿಜೆಪಿಗೆ ಬರೋಕೆ ರೆಡಿ ಇದಾರೆ: ಶಾಸಕ ಮುನಿರತ್ನ

ಚುನಾವಣಾ ಟೈಮಲ್ಲೇ ವಿಪಕ್ಷ ನಾಯಕ ಆರ್‌ ಅಶೋಕ್‌ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಸಿಎಂ ಸಿದ್ಧರಾಮಯ್ಯ ಅವರನ್ನ ಅಧಿಕಾರದಿಂದ ಕೆಳಗಿಳಿಸೋಕೆ ಸಂಚು ರೂಪಿಸ್ತಿರೋ ಗ್ಯಾಂಗ್‌, ಕಾಂಗ್ರೆಸ್‌ ಪಕ್ಷದ ಒಳಗೇ ಇದೆ.

ಇಲ್ಲಿ ಸೂಪರ್‌ ಸಿಎಂಗಳು, ಶಾಡೋ ಸಿಎಂಗಳು ಬಹಳಷ್ಟು ಜನ ಇದಾರೆ. ಬಿಕೆ ಹರಿಪ್ರಸಾದ್‌ ಕೂಡ ಮಸಲತ್ತು ಮಾಡ್ತಿದ್ದಾರೆ ಅಂತ ಆರ್‌ ಆಶೋಕ್‌ ಹೇಳಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಹಲವು ಬಾರಿ ಕಿಚಡಿ ಸರ್ಕಾರ ಬಂದಿತ್ತು. ಆವಾಗೆಲ್ಲಾ ರಾಜ್ಯದ ಪರಿಸ್ಥಿತಿ ಪಚಡಿ ಆಗೋಗಿತ್ತು.

ಜನರಿಗೆ ಈ ಕಿಚಡಿ ಪಚಡಿ ಸರ್ಕಾರ ಬೇಕಾಗಿಲ್ಲ. ಕೇಂದ್ರದಲ್ಲೂ ಜನ ನರೇಂದ್ರ ಮೋದಿಯವ್ರ ಸ್ಥಿರ ಸರ್ಕಾರ ಬರ್ಬೇಕು ಅಂತ ಬಯಸ್ತಾರೆ ಅಂದಿದ್ದಾರೆ. ಗುಬ್ಬಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲಿಲ್ಲ ಅಂದ್ರೆ ಅದರ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ ರಾಜಿನಾಮೆ ಕೊಡ್ಬೇಕಾಗುತ್ತೆ ಅಂದಿದ್ರು. ಇದಕ್ಕೆ ಪ್ರತಿಕ್ರಿಯಿಸೋ ವೇಳೆ ಅಶೋಕ್‌ ಈ ರೀತಿ ಹೇಳಿದ್ದಾರೆ.

ಇನ್ನು ಇದಕ್ಕೆ ಪುಷ್ಠಿ ಕೊಡುವಂತೆ, ಡಿಸಿಎಂ ಡಿಕೆ ಶಿವಕುಮಾರ್‌ 40 ಶಾಸಕರ ಜೊತೆ ಬಿಜೆಪಿ ಸೇರೋಕೆ ರೆಡಿಯಾಗಿದ್ದಾರೆ ಅಂತೇಳಿ ಶಾಸಕ ಮುನಿರತ್ನ ನಾಯ್ಡು ಶಾಕ್‌ ಕೊಟ್ಟಿದ್ದಾರೆ. ಅಲ್ಲದೆ ನಾವು ನಮ್ಮ ಪಕ್ಷದ ಬಾಗಿಲನ್ನ ಡಿಕೆಶಿ ಅವರಿಗೆ ತೆಗೆದಿಲ್ಲ. ತೆಗೆದ್ರೆ ಅಷ್ಟೂ ಜನರನ್ನ ಕರ್ಕೊಂಡು ಪಕ್ಷಕ್ಕೆ ಬಂದೇ ಬಿಡ್ತಾರೆ ಅಂತ ಮುನಿರತ್ನ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಲ್ಕು ಜನ ಉಪಮುಖ್ಯಮಂತ್ರಿಗಳ ಬೇಡಿಕೆ ಇದೆ. ಅವ್ರ ಮಧ್ಯ ಇರೋದ್ರ ಬದಲು ಬಿಜೆಪಿ ಜೊತೆ ಇರೋದೆ ಒಳ್ಳೇದು ಅಂತ ತೀರ್ಮಾನ ಮಾಡ್ಕೊಂಡಿದ್ದಾರೆ. ನಾವು ಬಾಗಿಲು ತಗುದ್ರೆ ಸಾಕು. ಆದ್ರೆ ಸದ್ಯಕ್‌ ಅವ್ರು ಅಲ್ಲೇ ಇರ್ಲಿ ಅಂದಿದ್ದಾರೆ.

News Editor

Learn More →

Leave a Reply

Your email address will not be published. Required fields are marked *