ಅರವಿಂದ್ ಕೇಜ್ರಿವಾಲ್‌ ಬಂಧನದ ಬೆನ್ನಲ್ಲೇ ಅಣ್ಣ ಹಜಾರೆ ಮೊದಲ ಪ್ರತಿಕ್ರಿಯೆ.

Maharashtra, July 09 (ANI): Social activist Anna Hazare addressing media at the Sessions Court in Mumbai on Tuesday. (ANI Photo)

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿದೆ. ಆಮ್ ಆದ್ಮಿ ಪಾರ್ಟಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಸೇರಿದತೆ ವಿಪಕ್ಷಗಳು ಕೇಜ್ರಿವಾಲ್ ಬೆಂಬಲಕ್ಕೆ ನಿಂತಿದ್ದಾರೆ. ಇಡಿ ಹಾಗೂ ಬಿಜೆಪಿ ವಿರುದ್ಧ ಆಪ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಹೋರಾಟಗಾರ, ಅರವಿಂದ್ ಕೇಜ್ರಿವಾಲ್ ಆಪ್ತರಾಗಿರುವ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಂಧನ ಕೇಜ್ರಿವಾಲ್ ಸ್ವಯಂಕೃತ ಕೃತ್ಯ ಎಂದಿದ್ದಾರೆ

ನನ್ನ ಜೊತೆ ಹಲವು ಹೋರಾಟದಲ್ಲಿ ಪಾಲ್ಗೊಂಡಿರುವ ಅರವಿಂದ್ ಕೇಜ್ರಿವಾಲ್ ಮದ್ಯದ ವಿರುದ್ದ ಧ್ವನಿ ಎತ್ತಿದ್ದರು. ಹೋರಾಟ ಮಾಡಿದ್ದರು. ಆದರೆ ಈಗ ಅದೇ ಮದ್ಯ ನೀತಿ ಮಾಡಿ ಬಂಧನವಾಗಿದ್ದಾರೆ. ಕೇಜ್ರಿವಾಲ್ ಬಂಧನದಿಂದ ಬೇಸರವಾಗಿದೆ. ಆದರೆ ಅವರ ಕೃತ್ಯದಿಂದಲೇ ಬಂಧನವಾಗಿದೆ. ಈಗ ಅವರೇನು ಮಾಡುತ್ತಾರೆ? ಅಧಿಕಾರದ ಮುಂದೆ ಏನೂ ನಡೆಯುವುದಿಲ್ಲ. ಈಗ ಬಂಧನವಾಗಿದೆ. ಇನ್ನು ಕಾನೂನು ಪ್ರಕಾರ ಏನು ಆಗಬೇಕು ಅದು ನಡೆಯಲಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. 

News Editor

Learn More →

Leave a Reply

Your email address will not be published. Required fields are marked *