ಪುತ್ತೂರು ತಾಲೂಕಿನ ಮುರಳ್ಯದಲ್ಲಿ ಹಿಂದೂಗಳ ಭೂಮಿ ರಕ್ಷಣೆಯ ವಿಚಾರವಾಗಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ನಡೆಯಲಿರುವ ಈ ಪ್ರತಿಭಟನೆಗೆ ಹಿಂದೂ ಜಾಗರಣಾ ಪುತ್ತೂರು ಜಿಲ್ಲೆ ಸಂಪೂರ್ಣ ಬೆಂಬಲ ಘೋಷಿಸಿದೆ.
ವಕ್ಫ್ ಬೋರ್ಡ್‌ಗೆ ಭೂಮಿ ಸೇರ್ಪಡೆ ಮಾಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆಗಳು, ಸಾನಿಧ್ಯವಿರುವ ಭೂಮಿಯ ಹಕ್ಕು ಮತ್ತು ರಕ್ಷಣೆಯ ವಿಚಾರವಾಗಿ ಧ್ವನಿ ಎತ್ತಲು ಮುಂದಾಗಿವೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 28ರ ಬುಧವಾರ ಬೆಳಗ್ಗೆ 10 ಗಂಟೆಗೆ ಮುರಳ್ಯದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹಿಂದೂಗಳ ಭೂಮಿ ಮತ್ತು ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಸಮಸ್ತ ಹಿಂದೂ ಬಾಂಧವರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ಮುರಳ್ಯದಲ್ಲಿ ಭೂಮಿ ಹಕ್ಕಿನ ವಿಚಾರವಾಗಿ ನಡೆಯಲಿರುವ ಈ ಪ್ರತಿಭಟನೆ ಇದೀಗ ಗಮನ ಸೆಳೆದಿದ್ದು, ಪ್ರತಿಭಟನೆಯ ಮೂಲಕ ಸಂಘಟನೆಗಳು ಯಾವ ರೀತಿಯ ಹೋರಾಟದ ಸಂದೇಶ ನೀಡಲಿವೆ ಎಂಬುದು ಕುತೂಹಲ ಮೂಡಿಸಿದೆ.
ಅನಾದಿಕಾಲದಿಂದ ದೈವದ ಆರಾಧನೆ ಮಾಡಿಕೊಂಡು ಬಂದಿರುವ ಭೂಮಿಯ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಸಮಾಧಿ ಎಂಬಲ್ಲಿ ಮುರುಳ್ಯ ಗೌಡ ಮನೆತನದ ರಕ್ತೇಶ್ವರಿ ದೈವ ಹಾಗೂ ಉಪದೈವಗಳ ಆರಾಧನೆ ನಡೆಯುತ್ತಿದ್ದು, ಈ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮುರುಳ್ಯ ಗೌಡ ಮನೆತನವು ಅನಾದಿಕಾಲದಿಂದ ಈ ಪ್ರದೇಶದ ಕೃಷಿ ಭೂಮಿಯನ್ನು ನಿರ್ವಹಿಸಿಕೊಂಡು ಬರುವುದರ ಜೊತೆಗೆ, ರಕ್ತೇಶ್ವರಿ ದೈವ ಹಾಗೂ ಉಪದೈವಗಳ ಆರಾಧನೆಯ ಜವಾಬ್ದಾರಿಯನ್ನೂ ನಿರ್ವಹಿಸಿಕೊಂಡು ಬಂದಿದೆ ಎನ್ನಲಾಗಿದೆ. ಬಳಿಕ ಚೇತನ ಮತ್ತು ಕಿಶನ್ ದಂಪತಿಗಳು ಈ ಭೂಮಿಯನ್ನು ಖರೀದಿಸಿದ್ದು, ಪ್ರಸ್ತುತವೂ ಈ ಕುಟುಂಬವೇ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ.
ಇದೀಗ ಈ ಪ್ರದೇಶದಲ್ಲಿರುವ ಸುಮಾರು 5 ಎಕರೆ ಕೃಷಿ ಭೂಮಿ ಹಾಗೂ ದೈವದ ಬನದ ನಡುವೆ 10 ಮೀಟರ್ ಅಂತರವೂ ಇಲ್ಲದಿರುವ ಸಂದರ್ಭದಲ್ಲಿ, ಈ ಜಾಗವನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಅಲ್ಲದೆ, ರಾಜಕೀಯ ಒತ್ತಡದ ಮೂಲಕ ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರಿ, ಒಂದು ಎಕರೆ ಕೃಷಿ ಭೂಮಿಯನ್ನು ಗ್ರ್ಯಾಂಟ್ ಮಾಡಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಮೋಹನದಾಸ್ ಕಾಣಿಯೂರು ಆರೋಪಿಸಿದ್ದಾರೆ.


