ಟಿಕೆಟ್ ಕೈತಪ್ಪುವರ ಬೆಂಬಲಕ್ಕೆ ಬಿ ಎಸ್ ವೈನಾಳೆ ಸಂಜೆಯೊಳಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್

ಕಳೆದು ಒಂದು ವಾರದಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲವೆಂಬ ಸುದ್ದಿ ಹಬ್ಬಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡದಿಂದ ಎಂಪಿ ಟಿಕೆಟ್ ಫೈನಲ್ ಆಗಿದೆ ಎಂಬ ಬಗ್ಗೆ ಸುದ್ದಿಯಾಗಿತ್ತು. ಬಿಎಸ್ ವೈ ಅವರು ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತಿದ್ದಾರೆ.ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು ಮಾಡಿ ಬಿಜೆಪಿ ಹೈಕಮಾಂಡ್ ಗೆ ತಾನು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ನಾಳೆ ಮಾರ್ಚ್ 10 ರಂದು ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು ಮೋದಿ, ನಡ್ಡಾ ಅಮಿತ್ ಶಾ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಬಿಎಸ್ ವೈ ಅವರು ಪಾಲ್ಗೊಳ್ಳಲಿದ್ದಾರೆ.ನಾಳೆ ಸಂಜೆಯೊಳಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆಗಲಿದೆ. ಕರ್ನಾಟಕದಲ್ಲಿ ಬಿಎಸ್ ವೈ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೂರಕ್ಕೆ ನೂರರಷ್ಟು ಗ್ಯಾರಂಟಿಯಾಗಿದ್ದು, ಬಿ. ಎಲ್ ಸಂತೋಷ್ ರವರು ಕಟೀಲ್ ಪರವಿರುವುದರಿಂದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಎಂಪಿ ಟಿಕೆಟ್ ಪಡೆದು ಸ್ಪರ್ಧಿಸುವುದು ಸ್ಪಷ್ಟ ಹಾಗೂ ನೂರಕ್ಕೆ ನೂರು ಸತ್ಯವೆಂದು ವರದಿಯಾಗಿದೆ.ವಿವಾದ ರಹಿತ ನಿಷ್ಕಲ್ಮಶ ಮನಸ್ಸಿನ ನೇರ ನುಡಿಯ ನಿಷ್ಕಳಂಕ ನಾಯಕರಾಗಿರುವ ಕಟೀಲ್ ಅವರು ಯಾವುದೇ ಹಗರಣವಿಲ್ಲದ ಭ್ರಷ್ಟಾಚಾರವಿಲ್ಲದ ಜನಪರ ಜನ ಮೆಚ್ಚಿದ ನಾಯಕ ರಾಗಿದ್ದಾರೆ ಕಟೀಲ್ ರವರು ಈ ಸಲ ಸ್ಪರ್ಧಿಸಿದಲ್ಲಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಪ್ರಚಂಡ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂಬ ಸಮೀಕ್ಷೆ ವ್ಯಕ್ತವಾಗಿದೆ.

News Editor

Learn More →

Leave a Reply

Your email address will not be published. Required fields are marked *