
ಬೆಂಗಳೂರು : ಕ್ಯಾನ್ಸರ್ ಕಾರಕ ವಸ್ತುಗಳು ಇರುವುದರಿಂದ ರಾಜ್ಯದಲ್ಲೂಕೂಡ ಬಾಂಬೆ ಮಿಠಾಯಿ ಬ್ಯಾನ್ ಮಾಡಲು ಮುಂದಾಗಿದ್ದು ಅದೇ ರೀತಿ ಗೋಬಿಮಂಚೂರಿ ಕೂಡ ಇನ್ಮುಂದೆ ಬ್ಯಾನ್ ಆಗಲಿದೆ ಎಂಬ ಮಾಹಿತಿ ದೊರೆತಿದೆ. ಪಾಂಡಿಚೆರಿ ಮತ್ತು ತಮಿಳುನಾಡು ಸರ್ಕಾರಗಳು ಕಾಟನ್ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟ ನಿಷೇಧಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಬ್ಯಾನ್ ಮಾಡಲು ಸರಕಾರ ಚಿಂತನೆ ನಡೆಸುತ್ತಿದೆ.
ಜಾತ್ರೆ ಹಾಗೂ ಇನ್ನಿತರ ಹಬ್ಬದ ಸಮಯದಲ್ಲಿ ರಸ್ತೆ ಬದಿ ಮಾಡಿ ಕೊಡುವ ಗೋಬಿ ಮಂಚೂರಿ ಮಕ್ಕಳಿಂದ ಹಿಡಿದು ವೃದ್ದರವರೆಗೆ ಭಾರಿ ಅಚ್ಚುಮೆಚ್ಚು ಆದರೆ ಗೋಬಿ ಮಂಚೂರಿಯಲ್ಲಿ Sunset Yellow ಹಾಗೂ Tartrazine ಹಾನಿಕಾರಕ ಅಂಶ ಇರೋದ್ರಿಂದ ಗೋಭಿಪ್ರಿಯರು ಮುಂದೆ ಅನಾರೋಗ್ಯ ಕಾಡುವ ಮೊದಲು ಇಂತಹ ತಿಂಡಿತಿನಿಸುಗಳನ್ನು ಬ್ಯಾನ್ ಮಾಡಲು ಅರೋಗ್ಯ ಇಲಾಖೆ ಚಿಂತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀದಿ ಬೀದಿಗಳಲ್ಲಿ ಮಾರಾಟ ಮಾಡುವ ಮಾರಾಟ ಮಾಡುವ ಬಾಂಬೆ ಮಿಠಾಯಿ ಮಕ್ಕಳ ಅಚ್ಚುಮೆಚ್ಚಿನ ತಿನಿಸಾಗಿದೆ,ಜಾತ್ರೆ ಸೇರಿದಂತೆ ಹಲವು ಕಡೆ ಇದನ್ನು ಮಾರಾಟ ಮಾಡಲಾಗುತ್ತದೆ ಬಾಂಬೆ ಮಿಠಾಯಿ ಯಲ್ಲಿ ಇರುವ ರೊಡಮೈನ್ ಬಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು, ಕಣ್ಣು ದೃಷ್ಟಿ ಸಮಸ್ಯೆ ಹಾಗೂ ಲಿವರ್ ಸಂಬಂಧಿ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು ಮಾ 11 ರಂದು ಅರೋಗ್ಯ ಇಲಾಖೆಯಿಂದ ಮಹತ್ವದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ನಿಷೇಧ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.


