ಬಸ್ ಡ್ರೈವರ್ ಇಮ್ರಾನ್ ಜತೆ ಪ್ರೀತಿ, ಪ್ರೇಮ: ಮದ್ವೆಯಾದ ಮೂರೇ ವರ್ಷಕ್ಕೆ ಆಶಾ ಅನುಮಾಸ್ಪದ ಸಾವು!! ಲವ್ ಜಿಹಾದ್ ಆರೋಪ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸಯಳನಾಡು ಗ್ರಾಮದ 30 ವರ್ಷದ ಆಶಾ(30) ಎಂಬ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಆಶಾ ಮಂಗಳವಾರ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹಲವು ಅನುಮಾನುಗಳು ವ್ಯಕ್ತವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಆರೋಪ ಮಾಡಿವೆ.

ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್‌ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ದರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಆಶಾ, ಇಮ್ರಾನ್‌ ದಂಪತಿಗೆ ಎರಡೂವರೆ ವರ್ಷದ ಮಗು ಇದೆ.

ನಿನ್ನೆ ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಹಿರಿಯೂರು ಆಸ್ಪತ್ರೆಗೆ ಗಾಬರಿಯಲ್ಲಿ ಕರೆ ತಂದಿದ್ದಾನೆ. ಯಾವಾಗ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಇಮ್ರಾನ್ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ವರದಿಯಾಗಿದೆ.

ವರದಕ್ಷಿಣೆಗಾಗಿ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆಶಾ ಪೋಷಕರು ಆರೋಪಿಸಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ 1 ಲಕ್ಷ ಹಣ ಕೊಟ್ಟಿದ್ದೆವು. ಇಷ್ಟಾದ್ರೂ ಸುಮ್ಮನಾಗಿಲ್ಲ. ಈಗ ನೇಣುಬಿಗಿದು, ಆತ್ಮಹತ್ಯೆ‌ ಕತೆ ಕಟ್ಟಿ ಎಸ್ಕೇಪ್ ಆಗಿದ್ದಾನೆ ಎಂದು ಆಶಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಹಿಂದೂ ಸಂಘಟನೆಗಳು ಇದೊಂದು ಲವ್‌ ಜಿಹಾದ್ ಅಂತಾ ಆರೋಪಿಸಿದ್ದು, ತನಿಖೆ ನಡೆಸಿ ಎಂದು ಹಿರಿಯೂರು ನಗರ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಿರಿಯೂರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *