ಮಂಗಳೂರು: ಹೂಡಿಕೆಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ 12 ಲಕ್ಷ ರೂ. ವಂಚನೆ!!

ಮಂಗಳೂರು: ಹೂಡಿಕೆಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ 12 ಲಕ್ಷ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು CEN ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು (62) 2023ರಲ್ಲಿ ಗೂಗಲ್‌ನಲ್ಲಿ ಇನ್ವೆಸ್ಟ್‌ಮೆಂಟ್ ಬಗ್ಗೆ ಹುಡುಕುತ್ತಿದ್ದಾಗ “ಕಿಸಾನ್ ಪರಿವಾರ್ ಲಿಮಿಟೆಡ್” ಎಂಬ ಸಂಸ್ಥೆಯ ದೂರವಾಣಿ ಸಂಖ್ಯೆ 9991545545 ಕಂಡುಬಂದಿದೆ. ಸಂಪರ್ಕಿಸಿದಾಗ ಸಂಸ್ಥೆಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ.

ನಂಬಿದ ದೂರುದಾರರು 05-06-2023 ರಿಂದ 22-03-2026 ರವರೆಗೆ ಹಂತ ಹಂತವಾಗಿ ಒಟ್ಟು 12 ಲಕ್ಷ ರೂ.ಗಳನ್ನು ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆರಂಭದಲ್ಲಿ 30-09-2025 ರವರೆಗೆ 4,68,000 ರೂ. ಬಡ್ಡಿ ಹಣ ವಾಪಸ್ ಬಂದಿದ್ದು, ನಂತರ ಒಂದು ವರ್ಷದಿಂದ ಯಾವುದೇ ಹಣ ಬಂದಿಲ್ಲ.

ವಿಚಾರಿಸಿದಾಗ ಸಂಸ್ಥೆಗೆ ಸ್ವಲ್ಪ ಕಷ್ಟವಿದೆ, ಮುಂದಿನ ತಿಂಗಳು ಒಟ್ಟಿಗೆ ಹಾಕುತ್ತೇವೆ ಎಂದು ಹೇಳಿ ಕಾಲಹರಣ ಮಾಡಿದ್ದಾರೆ. ಅನುಮಾನ ಬಂದು ಪರಿಶೀಲಿಸಿದಾಗ ತಾವು ವಂಚನೆಗೊಳಗಾಗಿರುವುದು ಅರಿವಾಗಿದೆ.

ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ KISSAN PARIVAR LIMITED ಹೆಸರಿನಲ್ಲಿ ಹೂಡಿಕೆಯ ಆಮಿಷವೊಡ್ಡಿ ಸಂಘಟಿತ ಆನ್‌ಲೈನ್ ವಂಚನೆ ನಡೆಸಿದ್ದಾರೆ ಎಂದು CEN ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *