ಪುತ್ತೂರು: ಪುತ್ತೂರಿನಿಂದ ಹಿಡಿದು ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಪ್ರಸಿದ್ಧವಾಗಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಮಾಲಕರಾದ ಸರಾಫ್ ಮುಳಿಯ ಶ್ಯಾಮ ಭಟ್ (81ವ) ಅವರು ಅ.4ರಂದು ವಿಧಿವಶರಾಗಿದ್ದಾರೆ.
ಪುತ್ತೂರಿನ ಪಾಂಗ್ಲಾಯಿಯಲ್ಲಿರುವ ತಮ್ಮ ನಿವಾಸ ಶ್ಯಾಮಸುಲೋಚನಾ’ದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ನಿಧನರಾಗಿದ್ದಾರೆ.
ಚಿನ್ನಾಭರಣ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮುಳಿಯ ಶ್ಯಾಮ ಭಟ್ ಅವರು ಮುಳಿಯ ಗೋಲ್ಡ್ ಅಂಡ್ಯಂಡ್ ಡೈಮಂಡ್ಸ್ ಸಂಸ್ಥೆಯ ಪ್ರಗತಿಯಲ್ಲಿ ಬೆನ್ನೆಲುಬಾಗಿದ್ದರು. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರು ಪುತ್ರರಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ, ಪುತ್ರಿ ವಿದ್ಯಾಸರಸ್ವತಿ, ಅಳಿಯ ಶ್ಯಾಮಸುಂದರ್, ಸೊಸೆಯಂದಿರಾದ ಕೃಷ್ಣವೇಣಿಪ್ರಸಾದ್ ಮುಳಿಯ, ಅಶ್ವಿನಿಕೃಷ್ಣ ಮುಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅ.6ರಂದು ಮೃತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪುತ್ರರಾದ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣನಾರಾಯಣ ಮುಳಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


