25ಕ್ಕೂ ಅಧಿಕ ಜನರಿಗೆ ಕೋಟ್ಯಂತರ ರೂ. ವಂಚಿಸಿ ಪ್ರಿಯಕರನಿಗೆ ಗಿಫ್ಟ್ ನೀಡುತ್ತಿದ್ದ ನಕಲಿ ಲೇಡಿ PSI ಅರೆಸ್ಟ್..!

ಚಿಕ್ಕಮಗಳೂರು: ತಾನೊಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಎಂದು ನಂಬಿಸಿ, ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ವಂಚಿಸಿದ್ದ ನಕಲಿ ಲೇಡಿ PSIಯೊಬ್ಬಳನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿಯಾಗಿದ್ದು, ಈಕೆಯ ವಂಚನೆಯ ಜಾಲದ ಕರಾಳ ಮುಖಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿವೆ.

ಪ್ರಕರಣದ ಪ್ರಮುಖ ಮುಖ್ಯಾಂಶಗಳು:

ನಕಲಿ ಖಾಕಿ ಗಮ್ಮತ್ತು:ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ PSI ಎಂದೂ, ಸದ್ಯ ರಜೆಯಲ್ಲಿದ್ದೇನೆ ಎಂದು ಮುಗ್ಧ ಜನರನ್ನು ನಂಬಿಸುತ್ತಿದ್ದಳು. ಅಷ್ಟೇ ಅಲ್ಲದೆ, ಅಚ್ಚುಕಟ್ಟಾಗಿ ಪೊಲೀಸ್ ರೀತಿಯಲ್ಲೇ ಕೂದಲು ಕತ್ತರಿಸಿ, ಅದಕ್ಕೆ ತಕ್ಕ ವೇಷಭೂಷಣ ಧರಿಸಿ ಅಸಲಿ ಅಧಿಕಾರಿಯಂತೆ ಓಡಾಡುತ್ತಿದ್ದಳು.

ವಂಚನೆಯ ಜಾಲ:ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದ ಈಕೆ, ಅಲ್ಲಿಗೆ ಬರುತ್ತಿದ್ದ ಯುವಕರು ಹಾಗೂ ಮಹಿಳೆಯರೊಂದಿಗೆ ಸಲುಗೆ ಬೆಳೆಸಿ ಪರಿಚಯ ಮಾಡಿಕೊಳ್ಳುತ್ತಿದ್ದಳು.

ಕಾರುಗಳ ಕಳ್ಳಾಟ:ಪರಿಚಯವಾದವರ ಬಳಿ ಓಡಾಟಕ್ಕಾಗಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು, ನಂತರ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಳು ಎಂಬ ಗಂಭೀರ ಆರೋಪವೂ ಇದೆ. ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 25ಕ್ಕೂ ಹೆಚ್ಚು ಮಂದಿಗೆ ಈಕೆ ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಿಯಕರನಿಗಾಗಿ ಎಲ್ಲ ದರೋಡೆ!:ತಾನು ಜನರ ಮೋಸದಿಂದ ದೋಚಿದ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನಾಭರಣಗಳನ್ನು ತನ್ನ ಪ್ರಿಯಕರ ದೇವು ಎಂಬಾತನಿಗೆ ನೀಡುತ್ತಿರುವುದಾಗಿ ಆರೋಪಿ ನಿವೇದಿತಾ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ.

ಮೊಬೈಲ್‌ನಲ್ಲಿ ನಕಲಿ ಆಧಾರ್ ಕಾರ್ಡ್ ಪತ್ತೆ:ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಬೇರೆ ಬೇರೆ ಹೆಸರುಗಳಿರುವ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ನಕಲಿ ದಾಖಲೆಗಳನ್ನು ಯಾವೆಲ್ಲ ಕೃತ್ಯಗಳಿಗೆ ಬಳಸಲಾಗಿದೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ. ಬಳಸಲಾಗಿದೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

20ಕ್ಕೂ ಹೆಚ್ಚು ಸಂತ್ರಸ್ತರಿಂದ ದೂರು:

ಈಕೆಯ ಮೋಸಕ್ಕೆ ಬಲಿಯಾದ 20ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ದೂರು ನೀಡಿದ್ದು, ಚಿಕ್ಕಮಗಳೂರಿನ ಬಸವನಹಳ್ಳಿ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿ ನಿವೇದಿತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ‘ದೇವು’ಗಾಗಿ ಬಲೆ ಬೀಸಿದ್ದಾರೆ.

ಮುಂದಿನ ತನಿಖೆಯಿಂದ ವಂಚನೆಗೆ ಒಳಗಾದವರ ನಿಜವಾದ ಸಂಖ್ಯೆ ಹಾಗೂ ಒಟ್ಟು ವಂಚನೆಯ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *