ಕೇರಳ ರಾಜ್ಯದ (ಕಾಸರಗೋಡು ಜಿಲ್ಲೆ) ಕನ್ನಡ, ತುಳು ಮತ್ತು ವಿವಿಧ ಭಾಷಾ ಸಮುದಾಯ ಸಂಘಟನೆಗಳ ವಿಳಾಸದ ಡೈರೆಕ್ಟರಿ ಪ್ರಕಟಣೆಗೆ ಸಿದ್ಧತೆ

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29 ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ ,ಕೇರಳ- ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಕೇರಳ ರಾಜ್ಯದ (ಕಾಸರಗೋಡು ಜಿಲ್ಲೆ ) ಕನ್ನಡ, ತುಳು ಮತ್ತು ವಿವಿಧ ಭಾಷಾ ಸಮುದಾಯ ಸಂಘಟನೆಗಳ ವಿಳಾಸದ ಡೈರೆಕ್ಟರಿ ಇದರ 2 ನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.


ಕೇರಳ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 500 ರಷ್ಟು ಕನ್ನಡ ,ತುಳು ಮತ್ತು ವಿವಿಧ ಭಾಷಾ ಸಮುದಾಯಗಳ ಸಂಘ ಸಂಸ್ಥೆಗಳು ಮತ್ತು ಇತರ ಉಪಭಾಷೆಯ ಸಾಹಿತ್ಯಿಕ ಸಾಂಸ್ಕೃತಿಕ, ಸಾಮಾಜಿಕ, ಕನ್ನಡ, ತುಳು ಸಂಘಟನೆಗಳು ಹಾಗೂ ಸಾರ್ವಜನಿಕ ಸ್ವಯಂಸೇವಾ ಸಂಘ ಸಂಸ್ಥೆಗಳು, ಸುಮಾರು 500 ರಷ್ಟು ಭಜನಾ ಸಂಘ,ಭಜನಾ ಮಂಡಳಿ,ಭಜನಾ ಮಂದಿರಗಳು ಮತ್ತು ಸುಮಾರು 200 ರಷ್ಟು ಕೇರಳ ಸರಕಾರದ ಕನ್ನಡ ಶಾಲಾ ಕಾಲೇಜುಗಳು, ಖಾಸಗಿ ಕನ್ನಡ ಶಾಲೆ ಕಾಲೇಜುಗಳ ಹೆಸರು, ಪೂರ್ಣ ವಿಳಾಸ, ಮೊಬೈಲ್ ವಾಟ್ಸ್ ಪ್ ಸಂಖ್ಯೆ,ಇ-ಮೇಲ್, ಸ್ಥಾಪನೆಯಾದ ವರ್ಷ, ಸಂಕ್ಷಿಪ್ತ ಸಂಕ್ಷಿಪ್ತ ಪರಿಚಯ ಪತ್ರ ಮತ್ತು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳ ಹೆಸರು, ಮನೆ ವಿಳಾಸಗಳನ್ನು ಲೆಟರ್ ಹೆಡ್ /ಬಿಳಿ ಕಾಗದದಲ್ಲಿ ಪ್ರತ್ಯೇಕವಾಗಿ ಬರೆದು 2026 ಅಕ್ಟೋಬರ್ 31ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಲು ವಿನಂತಿಸಲಾಗಿದೆ.


ಸಂಪರ್ಕ ವಿಳಾಸ :- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ. ),ಕನ್ನಡ ಗ್ರಾಮ, ಮೀಪುಗುರಿ -ಪಾರೆಕಟ್ಟೆ ರಸ್ತೆ, ಕಾಸರಗೋಡು -671121
ಮೊಬೈಲ್ :9448572016,
9901951965 ಈ ವಿಳಾಸಕ್ಕೆ ವಾಟ್ಸ್ ಪ್ ಮೂಲಕ ಕಳುಹಿಸಬಹುದು.
Email :-
Shivaramakasaragod @gmail.com

Star Of Kudla

Learn More →

Leave a Reply

Your email address will not be published. Required fields are marked *