ಪಾಳುಬಿದ್ದ ಸೈಟ್ ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್!! ಸರ್ಕಾರದ ನಿಯಮದಿಂದ ಬಯಲಾಯ್ತು ಕೊಲೆ ರಹಸ್ಯ

ಬೆಂಗಳೂರಿನ ಪಾಳುಬಿದ್ದ ಸೈಟ್ ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಸೈಟ್ ಕ್ಲೀನಿಂಗ್ ವೇಳೆ ಮಹಿಳೆಯ ಶವ ನೋಡಿ ಮಾಲೀಕ ಶಾಕ್ ಆಗಿದ್ದಾನೆ. ಖಾಲಿ ಸೈಟ್ ಸ್ವಚ್ಛವಾಗಿಡಲು ಸರ್ಕಾರ ನಿಯಮ ಮಾಡಿತ್ತು. ಈ ಒಂದು ಹಿನ್ನೆಲೆಯಲ್ಲಿ ಎಂ ಎಸ್ ನಗರ ಅಗ್ರಹಾರ ಲೇಔಟ್ ನಲ್ಲಿ ಖಾಲಿ ಸೈಟ್ ನಲ್ಲಿ ಗಿಡ ಗಂಟಿ ಬೆಳೆದಿತ್ತು. ಈ ವೇಳೆ ಮಾಲೀಕ ಅದನ್ನು ಕ್ಲೀನ್ ಮಾಡಿಸುವಾಗ ಮಹಿಳೆಯ ಶವ ಪತ್ತೆಯಾಗಿತ್ತು. 

ತಕ್ಷಣ ಸಂಪಿಗೆಹಳ್ಳಿ ಠಾಣೆಗೆ ಮಾಲೀಕ ದೂರು ಕೊಟ್ಟಿದ್ದು ಸ್ಥಳಕ್ಕೆ ಬಂದು ಪೊಲೀಸರು ತನಿಖೆ ನಡೆಸಿದ್ದಾರೆ. ಮಳೆಯ ಗುರುತು ಪತ್ತೆಗೆ ಮುಂದಾಗಿದ್ದು,  ಈ ವೇಳೆ ಪತ್ನಿಯನ್ನು ಕೊಂದು ಖಾಲಿ ಸೈಟ್ ನಲ್ಲಿ ಪತಿಯೇ ಶವ ಬಿಸಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿ ಪತಿ ಸಾಗರ್ ಚಂದ್ರ ಹಾಗೂ ಪತ್ನಿ ಅನಸೂಯಾ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಬೆಂಗಳೂರಿನಲ್ಲಿ ಬಂದು ವಾಸವಿದ್ದರು. ಸಾಗರ್ ಚಂದ್ರ ರಾವತ್ ಮತ್ತು ಅನುಸೂಯ ದಂಪತಿಗಳು ವಾಸ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. 

ಹೋಟೆಲ್ ಒಂದರಲ್ಲಿ ಪತಿ ಸಾಗರ್ ಕೆಲಸ ಮಾಡಿಕೊಂಡಿದ್ದ ಆಗಸ್ಟ್ 11ರಂದು ಪತ್ನಿಯನ್ನು ಕೊಂದು ಶವದ ಜೊತೆಗೆ ಈತ ವಾಸ ಮಾಡಿದ್ದ ಮೂರು ದಿನಗಳ ಕಾಲ ಶವದ ಜೊತೆ ಕಾಲ ಕಳೆದಿದ್ದಾನೆ ನಂತರ ಎರಡು ದಿನಗಳ ಬಳಿಕ ಖಾಲಿ ಸೈಟ್ ನಲ್ಲಿ ಪತ್ನಿಯ ಶವ ಎಸೆದು ಎಸ್ಕೇಪ್ ಆಗಿದ್ದಾನೆ. ಖಾಲಿ ಸೈಟ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಇದೀಗ ಮಹಿಳೆಯ ಶವ ಪತಿಯಾಗಿದ್ದು ಪೊಲೀಸರು ಆರೋಪಿ ಸಾಗರ್ ಚಂದ್ರನನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.

Star Of Kudla

Learn More →

Leave a Reply

Your email address will not be published. Required fields are marked *