ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ.

ಸಿಐಡಿ ನಡೆಸುತ್ತಿರುವ ಸುದೀರ್ಘ ತನಿಖೆಯಿಂದ ಕಾಸು ಕೊಟ್ಟು ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದವರ ಜಾಲ, ಕೋಟಿಗಟ್ಟಲೆ ಕಪ್ಪುಹಣದ ವರ್ಗಾವಣೆ ಹಾಗೂ ಜಾಲದ ಹಿಂದಿರುವ ಕಿಂಗ್ಪಿನ್ಗಳ ಕೃತ್ಯಗಳು ಸಂಪೂರ್ಣವಾಗಿ ಬಹಿರಂಗಗೊಂಡಿವೆ.
ಆರಂಭದಲ್ಲಿ ಕೇವಲ 8 ರಿಂದ 10 ಅಭ್ಯರ್ಥಿಗಳು ಹಣ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಸಿಐಡಿ ತನಿಖೆಯ ವೇಳೆ ಬಸವರಾಜ್ ಕನ್ನಾಳೆ ಎಂಬ ಮಧ್ಯವರ್ತಿಯು ಬರೊಬ್ಬರಿ 24 ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನವೇ ಟ್ರೈನಿಂಗ್ ನೀಡಿ, ಮುಂಗಡ ಹಣ ಇಸ್ಕೊಂಡಿರುವುದು ದೃಢಪಟ್ಟಿದೆ.
ಪ್ರತಿಯೊಬ್ಬ ಅಭ್ಯರ್ಥಿಯಿಂದ ₹20 ಲಕ್ಷದಿಂದ ₹80 ಲಕ್ಷದವರೆಗೆ ಹಣ ನಿಗದಿಪಡಿಸಲಾಗಿತ್ತು. ಪರೀಕ್ಷೆಗೂ ಮುನ್ನವೇ ಒಟ್ಟು ₹12 ಕೋಟಿಯಷ್ಟು ಬೃಹತ್ ಮೊತ್ತ ಸಂಗ್ರಹವಾಗಿತ್ತು. ಬೀದರ್ನ ಕೋ-ಆಪರೇಟಿವ್ ಬ್ಯಾಂಕ್ನಲ್ಲಿರುವ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಖಾತೆಯಲ್ಲಿ ₹75 ಲಕ್ಷ ನಗದು ಡೆಪಾಸಿಟ್ ಇಟ್ಟಿರುವುದು ಪತ್ತೆಯಾಗಿದ್ದು, ಅದನ್ನು ಸಿಐಡಿ ಸೀಜ್ ಮಾಡಿದೆ.
ಈ ಅಕ್ರಮದ ಕೊಂಡಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರಿಗೂ ತಲುಪಿದೆ. ಹಣಕಾಸಿನ ವ್ಯವಹಾರ ನೇರವಾಗಿ ಜ್ಞಾನೇಂದ್ರ ಅವರ ಅಕೌಂಟ್ಗೆ ಜಮೆಯಾಗದೆ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ತೀವ್ರ ಚಾಲಾಕಿತನದಿಂದ ನಡೆಸಲ್ಪಟ್ಟಿತ್ತು:
ಈ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಬಲ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿರುವ ಸಿಐಡಿ, ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದೆ.


