ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಅವರಿಗೆ ನಿಗಮ ಮಂಡಳಿಗೆ ತಪ್ಪಿದ ಅವಕಾಶ : ಅಭಿಮಾನಿಗಳಿಂದ ಸಾಮೂಹಿಕ ರಾಜೀನಾಮೆಗೆ ನಿರ್ಧಾರ

ಕೋಟ: ಉಡುಪಿ ಜಿಲ್ಲೆಯ ಕೋಟ ಕಾಂಗ್ರೆಸ್ ನ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು 2018 ಮತ್ತು 2023 ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು ಎರಡು ಬಾರಿ ಟಿಕೆಟ್ ವಂಚಿತರಾಗಿರುತ್ತಾರೆ.

ಹಾಗೆ ಕಳೆದ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಿಗಮ ಮಂಡಳಿ ಸ್ಥಾನಕ್ಕೆ ಇವರು ಆಕಾಂಕ್ಷಿಯಾಗಿದ್ದು ಕೊನೆಗಳಿಗೆನಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುತ್ತದೆ. ಅಂದು ಪಕ್ಷದ ನಾಯಕರ ಮೇಲೆ ಬೇಸರಗೊಂಡಿದ್ದ ಶಂಕರ್ ಎ ಕುಂದರವರನ್ನು ಸಮಾಧಾನ ಪಡಿಸುವಲ್ಲಿ ಅವರ ನಾಯಕರಾದ ಓಸ್ಕರ ಫೆರ್ನಾಂಡಿಸ್ ರವರು ಯಶಸ್ವಿಯಾಗಿದ್ದರು, ಹಾಗೆ ಮುಂದಿನ ದಿನಗಳಲ್ಲಿ ನಿಮಗೆ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಭರವಸೆ ಇಟ್ಟಿದ್ದರು. ಈ ಬಾರಿ ಕೂಡ ನಿಗಮ ಮಂಡಳಿಯಲ್ಲಿ ಆಕಾಂಕ್ಷಿಯಾಗಿದ್ದ ಶಂಕರ್ ಎ ಕುಂದರವರರಿಗೆ ನೀಡದಿದ್ದನ್ನು ಖಂಡಿಸಿ ಅವರ ಅಭಿಮಾನಿಗಳು ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವ ಕೋಡಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಶಂಕರ್ ಬಂಗೇರ, ರಾಜ್ಯ ಮೀನುಗಾರ ಕ್ರಿಯಾ ಸಮಿತಿಯ ಕಾರ್ಯದರ್ಶಿಗಳಾದ ರಮೇಶ್ ತಿಂಗಳಾಯ, ಕೋಡಿ ಗ್ರಾಮೀಣ ಸಮಿತಿ ಮಾಜಿ ಅಧ್ಯಕ್ಷರಾದ ಮಹೇಶ್ ಪೂಜಾರಿ, ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂತೋನಿ ಡಿಸೋಜ ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಕೈಗೊಂಡರು ಎಂದು ತಿಳಿಯಲಾಗಿದೆ.

ಈ ಸಂದರ್ಭದಲ್ಲಿ ಭಾಸ್ಕರ್ ಕಾಂಚನ್, ವಿಶ್ವನಾಥ್ ಪೂಜಾರಿ, ಶಂಕರ್ ಪೂಜಾರಿ ಕನ್ಯಾನ, ಸತೀಶ್ ತಿಂಗಳಾಯ ಕನ್ಯಾನ, ಕೃಷ್ಣಪ್ಪ ಬಂಗೇರ ಹೊಸಬೆಂಗ್ರೆ, ದಯಾನಂದ ಕರ್ಕೇರ ಕೋಡಿ ಕನ್ಯಾನ, ಕರುಣಾಕರ್ ಖಾರ್ವಿ ಹೊಸ ಬೆಂಗ್ರೆ, ರವೀಂದ್ರ ಕೋಡಿ, ಮಾಜಿ ಕೋಡಿ ಪಂಚಾಯತ್ ಸದಸ್ಯರಾದ ನಾಗೇಶ್ ಖಾರ್ವಿ, ಝಕ್ರಿಯ, ಅನಂತ ಪೂಜಾರಿ ಕೋಡಿ, ಬಡಿಯ ಪೂಜಾರಿ ಕೋಡಿ, ಮಹೇಶ್ ಕುಮಾರ್ ಕೋಡಿ ಬೆಂಗ್ರೆ, ಸಂತೋಷ್ ಬಂಗೇರ ಕೋಡಿ, ಬಚ್ಚ ಪೂಜಾರಿ ಕನ್ಯಾನ, ಹರೀಶ್ ಮೆಂಡನ್ ಕನ್ಯಾನ, ಹರೀಶ್ ಕುಂದರ್ ಕೊಡಿ ಬೆಂಗ್ರೆ, ಮೋಹನ್ ಸುವರ್ಣ ಕೋಡಿ ಬೆಂಗ್ರೆ, ಸತೀಶ್ ತಿಂಗಳಾಯ ಕೋಡಿ, ಕೇಶವ ಬಂಗೇರ ಹೊಸಬೆಂಗ್ರೆ, ತಿಮ್ಮಪ್ಪ ಪೂಜಾರಿ ಕೋಡಿ, ತಿಲಕ್ ಕೋಡಿ ಬೆಂಗ್ರೆ, ರಮೇಶ್ ಕೋಟ್ಯನ್ ಹಾಗೂ ಕೋಡಿ ಬೆಂಗ್ರೆಯ ಗ್ರಾಮೀಣ ಸಮಿತಿಯ ಎಲ್ಲ ಸದಸ್ಯರು ಸಭೆ ಸೇರಿ ಕಾಂಗ್ರೆಸ್ ಪಕ್ಷ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಕೈಗೊಂಡರು, ಕೋಟ ಬ್ಲಾಕ್ ಕಾಂಗ್ರೆಸ್ ನ ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ, ಗಣೇಶ್ ಕೆ ನೆಲ್ಲಿಬೆಟ್ಟು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!