ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅನುದಾನ ಶೀರ್ಘ ಬಿಡುಗಡೆಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ವೈದ್ಯಕೀಯ ಮಹಾ ವಿದ್ಯಾಲಯ ( ಮೆಡಿಕಲ್ ಕಾಲೇಜು) ವಿಚಾರಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳು ಪ್ರಾರಂಭಗೊಂಡಿದ್ದು ಸರಕಾರ ನಿಗಧಿಪಡಿಸಿದ ಅನುದಾನವನ್ನು ಶೀಘ್ರ ಮಂಜೂರುಗೊಳಿಸಿ ಸಹಕಾರ ನೀಡುವಂತೆ ಶಾಸಕ ಅಶೋಕ್ ರೈ ಅವರು ವೈಧ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಹ್ಸಿನ್,ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ವಿಶಾಲ್ ಆರ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿ ಶೋಭಾ ಅವರುಳ ಜೊತೆ ಮಾತುಕತೆ ನಡೆಸಿ ಮನವಿ ಮಾಡಿದ್ದಾರೆ.,

ಬುಧವಾರ ಮೂವರು ಪ್ರಮುಖ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ದ ಕ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾದ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಸರಕಾರ ಅನುಮೋದನೆ ನೀಡುವ ಕಾಲೇಜು ಪ್ರಾರಂಭಕ್ಕೆ ಅನುಮತಿಯನ್ನು ನೀಡಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ನಿಗಧಿತ ಜಾಗದಲ್ಲಿ ಪ್ರಾರಂಭಗೊಂಡಿದೆ. ೨೦೨೭ ರಲ್ಲಿ ಕಾಲೇಜು ಪ್ರಾರಂಭಕ್ಕೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದ್ದು ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಮಾತುಕತೆ ನಡೆದಿದೆ. ಕಾಲೇಜು ಪ್ರಾರಂಭವಾಗುವ ವೇಳೆ ಕಟ್ಟಡದ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಬೇಕಿದ್ದು ಇದಕ್ಕೆ ಸರಕಾರ ನಿಗಧಿಪಡಿಸಿದ ಅನುದಾನವನ್ನು ಶೀಘ್ರ ಮಂಜೂರುಗೊಳ್ಳಬೇಕಿದೆ. ಅನುದಾನ ಮಂಜೂರುಗೊಂಡ ಬಳಿಕ ಮುಖ್ಯಮಂತ್ರಿಗಳು ಪುತ್ತೂರು ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸವನ್ನು ನಡೆಸಲಿದ್ದಾರೆ. ಈಗಾಗಲೇ ಕಾಲೇಜಿಗೆ ಸಂಬಂಧಪಟ್ಟ ಕಡತಗಳು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕವೇ ಸರಕಾರಕ್ಕೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯ ಮೂಲಕ ಕಡತಗಳು ಶೀಘ್ರವಿಲೇವಾರಿಯಾಗುವುದರ ಜೊತೆಗೆ ಅನುದಾನದ ಶೀಘ್ರ ಬಿಡುಗಡೆಗೆ ಸಹಕಾರ ನೀಡುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ.

ಪುತ್ತೂರಿನಲ್ಲಿ ಪ್ರಾರಂಭವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಕುರಿತು ಈಗಾಗಲೇ ಬಹುಹಂತದ ಮಾತುಕತೆಗಳು ನಡೆದಿದೆ. ಇನ್ನು ಸರಕಾರದಿಂದ ಅನುಮೋದನೆಯ ಜೊತೆಗೇ ಅನುದಾನವೂ ಬಿಡಿಗಡೆಯಾಗಬೇಕಿದೆ. ಅನುದಾನ ಬಇಡುಗಡೆಯಾದ ತಕ್ಷಣ ಕಾಲೇಜಿಗೆ ಶಿಲಾನ್ಯಾಸ ಪ್ರಕ್ರಿಯೆ ನಡೆಯಲಿದೆ. ಸಮರೋಪಾದಿಯಲ್ಲಿ ಈ ಕಾರ್ಯಗಳು ನಡೆಯಬೇಕೆಂಬ ಉದ್ದೇಶದಿಂದ ಸಚಿವರು ಹಾಗೂ ಸಂಬಂದಪಟ್ಟ ಇಲಾಖೆಯ ಪ್ರಮುಖ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮನವಿಯನ್ನು ಮಾಡಿದ್ದೇನೆ

News Editor

Learn More →

Leave a Reply

Your email address will not be published. Required fields are marked *