ಮನೆ ಲಾಕ್ ಮಾಡಿ ಊರಿಗೆ ಹೋಗ್ತೀರಾ..? ಹಾಗಿದ್ರೆ ಈ ಪೊಲೀಸ್ ಸೇವೆ ಬಗ್ಗೆ ಗೊತ್ತಿರಲಿ..!

ಮಂಗಳೂರು ನಗರ ಪೊಲೀಸ್ ವತಿಯಿಂದ ಸಾರ್ವಜನಿಕರ ಸುರಕ್ಷತೆಗೆ ಉಪಯುಕ್ತವಾದ ವಿಶೇಷ ಸೇವೆಯೊಂದು ಜಾರಿಯಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಮುದಾಯ ಪೊಲೀಸ್ ಉಪಕ್ರಮವಾದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಯಾರಾದರೂ ಕುಟುಂಬ ಸಮೇತ ಊರಿಗೆ, ಪ್ರವಾಸಕ್ಕೆ ಅಥವಾ ಬೇರೆ ಕಾರಣಗಳಿಗೆ ಮನೆ ಲಾಕ್ ಮಾಡಿ ಹೋಗುವ ಸಂದರ್ಭಗಳಲ್ಲಿ, ಮನೆ ಸುರಕ್ಷತೆ ಬಗ್ಗೆ ಆತಂಕ ಸಾಮಾನ್ಯ. ಇಂತಹ ಸಂದರ್ಭಗಳಿಗೆ ನೆರವಾಗಲು ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ ನಾಗರಿಕರು ತಮ್ಮ ಮನೆ ಲಾಕ್ ಮಾಡಿ ಹೊರಡುತ್ತಿರುವ ಮಾಹಿತಿ ಪೊಲೀಸರಿಗೆ ವಾಟ್ಸಾಪ್ ಮೂಲಕ ಹಂಚಿಕೊಂಡರೆ, ಆ ಮನೆಗಳ ಮೇಲೆ ಸ್ಥಳೀಯ ಪೊಲೀಸರು ನಿಯಮಿತ ಪೆಟ್ರೋಲಿಂಗ್ ಹಾಗೂ ನಿಗಾವಹಿಸಲಿದ್ದಾರೆ.

ಯೋಜನೆಯ ಉಪಯೋಗ ಏನು..?

  • ಮನೆಗಳ ಸುರಕ್ಷತೆ ಮೇಲಿನ ಆತಂಕ ಕಡಿಮೆ
  • ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಪೊಲೀಸ್ ನಿಗಾ
  • ಕಳ್ಳತನ ತಡೆಗೆ ಸಹಕಾರಿ
  • ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಉತ್ತಮ ಸಹಕಾರ

ಹೇಗೆ ಸೇವೆ ಪಡೆಯಬಹುದು..?

ಪ್ರಯಾಣಕ್ಕೆ ತೆರಳುವ ಮೊದಲು ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಮನೆ ಲಾಕ್ ಇರುವ ಅವಧಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಮಂಗಳೂರು ನಗರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿದರೆ ಸಾಕು.

ಸಾರ್ವಜನಿಕರು ಈ ಉಪಕ್ರಮವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮನೆಗಳ ಸುರಕ್ಷತೆಗೆ ಪೊಲೀಸರೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.

News Editor

Learn More →

Leave a Reply

Your email address will not be published. Required fields are marked *