
ಕುಂದಾಪುರ: Dr. Satish Kharvi ಅವರು POWERLIFTING INDIA ಮತ್ತು ಕೂಳೂರು ಸ್ಪೋರ್ಟ್ಸ್ ಪ್ರಮೋಟರ್ಸ್ ಸಂಯೋಜನೆಯಲ್ಲಿ, ಕರ್ನಾಟಕ ಪವರ್ಲಿಫ್ಟಿಂಗ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಪವರ್ಲಿಫ್ಟಿಂಗ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಹಾಗೂ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಮಟ್ಟದ ಪವರ್ಲಿಫ್ಟಿಂಗ್ ಸ್ಪರ್ಧಾಕೂಟ – 2026ರಲ್ಲಿ ಅದ್ಭುತ ಸಾಧನೆ ಮೆರೆದಿದ್ದಾರೆ.


ಪುರುಷರು ಮತ್ತು ಮಹಿಳೆಯರಿಗಾಗಿ ಫೆಬ್ರವರಿ 14 ಮತ್ತು 15ರಂದು ನಡೆದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ, ಡಾ. ಸತೀಶ್ ಖಾರ್ವಿ ಅವರು 66 ಕೆಜಿ M-2 ವಿಭಾಗದಲ್ಲಿ Classic ಮತ್ತು Equipped ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಜೊತೆಗೆ ಅವರಿಗೆ “ಕರ್ನಾಟಕದ ಬಲಿಷ್ಠ ಪುರುಷ – 2026” ಪ್ರಶಸ್ತಿಯೂ ಲಭಿಸಿದೆ.
ಇದೇ ಸ್ಪರ್ಧೆಯಲ್ಲಿ ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ನ ಸದಸ್ಯ ಕಾರ್ತಿಕ್ ಪೂಜಾರಿ ಅವರು 93 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಮಟ್ಟದ “ಬಲಿಷ್ಠ ಪುರುಷ – 2026” ಪ್ರಶಸ್ತಿ ಪಡೆದಿದ್ದಾರೆ. ಕಾರ್ತಿಕ್ ಪೂಜಾರಿ ಅವರು ಡಾ. ಸತೀಶ್ ಖಾರ್ವಿ ಅವರ ಬಳಿ ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದ್ದು, ತಮ್ಮ ಶಿಷ್ಯನ ಸಾಧನೆಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಗೆ ಬೆಂಬಲಿಸಿದ ಕುಟುಂಬಸ್ಥರು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳಿಗೆ ಡಾ. ಸತೀಶ್ ಖಾರ್ವಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಕುಂದಾಪುರ ಭಾಗದ ಕ್ರೀಡಾಭಿಮಾನಿಗಳು ಇವರ ಸಾಧನೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.


