ಚಿಕಿತ್ಸೆ ವೇಳೆ ತಪ್ಪಿಸಿಕೊಂಡ ಕೈದಿ ಮತ್ತೆ ಬಂಧನ

ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆಗೆ ದಾಖಲಾಗಿದ್ದ ಕೈದಿ ಬಾತ್ ರೂಮ್ ಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಿಕೊಂಡು, ಮತ್ತೆ ಅರೆಸ್ಟ್ ಆಗಿದ್ದಾನೆ.

ಪೋಕ್ಸೋ ಕೇಸ್ ನಲ್ಲಿ ಶಿಕ್ಷೆಗೆ ಒಳಪಟ್ಟ ಕೈದಿ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದ‌. ಈ ವೇಳೆ ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಓಡಿಹೋಗಿದ್ದ ಕೈದಿಯನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

ಈ ಆರೋಪಿ ಪೋಕ್ಸೋ ಕೇಸ್ ನಲ್ಲಿ 20ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿ ಹಿಂಡಲಗಾ ಜೈಲಿನಲ್ಲಿದ್ದ. ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಕೈದಿ.

ಅನಾರೋಗ್ಯ ಹಿನ್ನೆಲೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕರೆತಂದಾಗ ಈ ಘಟನೆ ಸಂಭವಿಸಿದೆ. ನಿನ್ನೆ ಬೆಳಿಗ್ಗೆ 8.35ಕ್ಕೆ ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ಕೈದಿ ಅನಿಲ್ ತಪ್ಪಿಸಿಕೊಂಡು ಹೋಗಿದ್ದ. ಬೆಳಿಗ್ಗೆಯಿಂದಲೂ ನಿರಂತರವಾಗಿ ಹಿಂಡಲಗಾ ಜೈಲಿನ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.‌

ಇಡೀ ದಿನ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲೇ ಅಡಗಿಕೊಂಡು ಸಂಜೆ 6 ಗಂಟೆ ಸಮಯದಲ್ಲಿ ಹೋಡಿಹೋಗಲು ಪ್ಲಾನ್ ಮಾಡಿದ್ದಾನೆ. ಓಡಿಹೋಗುವಾಗ ಕೋರ್ಟ್ ಆವರಣದ ಪಕ್ಕದಲ್ಲಿ ಕೈದಿಯನ್ನು ಮರಳಿ ಹಿಂಡಲಗಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪುತ್ತೂರು: ಪುತ್ತೂರಿನಲ್ಲಿ ಎಣ್ಣೆಯ ಅಮಲಿನಲ್ಲಿ ಟ್ರಾನ್ಸ್‌ಫಾರ್ಮ‌ರ್ ಏರಿದ ವ್ಯಕ್ತಿ: ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದು ಗಾಯ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಬೈಂದೂರು: ಸುರಕ್ಷತಾ ಲೋಪ ಬಯಲಿಗೆಳೆಯಲು ಹೋದ ಮಾಧ್ಯಮಕ್ಕೆ ಅಡ್ಡಿಪಡಿಸಿದ ವ್ಯಕ್ತಿ!-ಮರವಂತೆ ಬೀಚಿನಲ್ಲಿ ತಡೆಗೋಡೆಗಳ ಬಲೆ ನೆಟ್ ಅಳವಡಿಕೆಯಲ್ಲಿ ಕಾಣದ ಕೈಗಳ ಕೈವಾಡ..?
0 Minutes
ರಾಜಕೀಯ
ಪುತ್ತೂರು: ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೆ – ರಾಜಕೀಯ ಚರ್ಚೆ ತೀವ್ರ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್ ರಾಜಕೀಯ
ಪುತ್ತೂರು: ಪುತ್ತೂರು ಬಿಜೆಪಿ ನಗರ ಮಂಡಲದ ಹಿಂದುಳಿದ ಮೋರ್ಚಾದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.