ರವಿಕಾಂತ್ ತೆಂಡೂಲ್ಕರ್ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಆಗ್ರಹ

ಕಾರವಾರ: ನಗರದ ಕೆ.ಇ.ಬಿ. ಬಳಿಯ ನಿವಾಸಿ ಹಾಗೂ ತರಕಾರಿ ವ್ಯಾಪಾರಿ ರವಿಕಾಂತ್ ಪುರುಷೋತ್ತಮ್ ತೆಂಡೂಲ್ಕರ್ ಅವರ ಮೇಲೆ ಇತ್ತೀಚೆಗೆ ಕಾರವಾರದ ಜುಬೇರ್ ಮುಸ್ತಫಾ ಮತ್ತು ಅಲ್ಲಾ ಭಕ್ಷ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನ್ನು ಕಾರವಾರ ಬಿಜೆಪಿ ತೀವ್ರವಾಗಿ ಖಂಡಿಸಿದೆ.


ಈ ಕುರಿತು ಇಂದು ಕಾರವಾರ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ಕಾರ್ಯಕರ್ತರು ಕಾರವಾರ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅಂಬಿಗ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

“ಕಾರವಾರ ಶಾಂತಿಯುತ ಪ್ರದೇಶ. ಇಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯವರು ಭವಿಷ್ಯದಲ್ಲಿ ಎಚ್ಚರಿಕೆ ವಹಿಸಬೇಕು” ಎಂದು ಮನವಿಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಆರೋಪಿಗಳನ್ನು ಬಂಧಿಸದೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಮುಂದೆ ಪೊಲೀಸ್ ಠಾಣೆಯ ಎದುರು ಹೋರಾಟ ನಡೆಸಲಾಗುವುದು ಎಂದು ಕಾರವಾರ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ಕಾರವಾರ ಬಿಜೆಪಿಯ ನಗರಾಧ್ಯಕ್ಷ ನಾಗೇಶ್ ಕುರ್ಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಅಶೋಕ್ ಗೌಡ, ಸುಧಾಕರ್ ಗುನಗಿ, ಅರುಣ್ ಹಬ್ಬು, ಭರತ್, ವಿನಾಯಕ್ ಸೆಟ್, ಗುರು ಸಾವಂತ್, ಮಾರುತಿ ದೂದಾಳ್ಕರ್, ಅಮಿತ್ ಕಾಮತ್, ಗುರುಪ್ರಸಾದ್ ನಾಯ್ಕ್, ಸಂದೇಶ್ ಶೆಟ್ಟಿ, ಉದಯ್ ಕಲ್ಗುಟ್ಕರ್, ಸತೀಶ್ ತಳೇಕರ್, ಸಂತೋಷ್ ಗೂವೇಕರ್, ಸಾಂಭಾಜಿ ನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *