ಪುತ್ತೂರು : ನಿಮಿಷ ನ್ಯೂಸ್ ಪುತ್ತೂರು ಇದರ ಉದ್ಘಾಟನಾ ಸಮಾರಂಭವು ಸೆ. 9 ರಂದು ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ಸ್ ನಲ್ಲಿ ನಡೆಯಲಿದೆ ಎಂದು ನಿಮಿಷ ನ್ಯೂಸ್ ಮುಖ್ಯ ನಿರ್ವಾಹಕ ಅಧಿಕಾರಿ ನವೀನ್ ಕುಲಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಹೊಸದಿಗಂತ ಪತ್ರಿಕೆಯ ಸಿ ಇ ಒ. ಪಿ.ಎಸ್.ಪ್ರಕಾಶ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಹಿರಿಯ ವೈದ್ಯ ಡಾ. ಎಂ. ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಕಚೇರಿ ಉದ್ಘಾಟನೆ ಮಾಡಲಿದ್ದು, ಶಾಸಕ ಅಶೋಕ್ ರೈ ಲೋಗೋ ಅನಾವರಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಸಹಾಯಕ ಆಯುಕ್ತೆ ಸ್ಟೇಲ್ಲಾ ವರ್ಗಿಸ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮನ್ಮಥ ಶೆಟ್ಟಿ, ಸಂಪಾದಕ ಶಿಶಿರ್ ರೈ ಉಪಸ್ಥಿತರಿದ್ದರು.


