ಪುತ್ತೂರು: ಜಿಮ್ ವರ್ಕೌಟ್ ಮಾಡುತ್ತಿರುವ ವೇಳೆ ಹೃದಯಾಘಾತಗೊಂಡು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಸೆ.5ರಂದುಸಂಜೆ ವೇಳೆ ನಡೆದಿದೆ.

ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈಯವರ ಪುತ್ರ ನೆಹರು ನಗರದ ಖಾಸಗಿ ಕಾಲೊಂದರ ಅಂತಿಮ ಬಿ.ಕಾಂ ವಿದ್ಯಾರ್ಥಿ ಶ್ರಮಿಕ್ (20ವ.) ಮೃತಪಟ್ಟ ದುರ್ದೈವಿ.
ಬೊಳುವಾರಿನ ಜಿಮ್ ಸೆಂಟರ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೇಳೆ ಉಸಿರುಕಟ್ಟಿದಂತಾಗಿತ್ತು. ಕೂಡಲೇ ಅವರನ್ನು ಬೊಳುವಾರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತಾದರೂ ಅಲ್ಲಿ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.


