
ಉಮಾಮೇಶ್ವರ ದೇವಸ್ಥಾನದ ಕ್ರೀಡಾಂಗಣದಲ್ಲಿ ಸುಮಾರು 1,50,000 ವೆಚ್ಚದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ 17ನೇ ವಾರ್ಡಿನ ಸದಸ್ಯರೂ ಆದ ಶ್ರೀಯುತ ಕರುಣಾಕರ ನಾಯ್ತೊಟ್ಟು ಇವರು ಪಂಚಾಯತ್ ಅಭಿವೃದ್ಧಿ ವತಿಯಿಂದ ನೀಡುತ್ತಾರೆ.
ಇದರ ಉದ್ಘಾಟನೆಯನ್ನು ನಿವೃತ್ತ ಕ್ಯಾಪ್ಟನ್ ದಾಸಪ್ಪ ಪೂಜಾರಿ ನೆಕ್ಕಿಲಾರು ಇವರು ನೆರವೇರಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕರುಣಾಕರ ನಾಯ್ತೊಟ್ಟು ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್ , ಶ್ರೀ ವೀರಪ್ಪಗೌಡ ರಾಯಬೆಟ್ಟು ಅಧ್ಯಕ್ಷರು ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ಮಾಮೇಶ್ವರ, ಶ್ರೀ ಮೋನಪ್ಪ ಗೌಡ ರಾಯರಬೆಟ್ಟು ಅಧ್ಯಕ್ಷರು 17ನೇ ವಾರ್ಡ್ ,
ವಿಶ್ವನಾಥ ನಾಯ್ತೊಟ್ಟು ಉಪಾಧ್ಯಕ್ಷರು ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ , ಶ್ರೀ ರವಿ ಅಂಚನ್ ಮಾಡ್ತೇಲು ಕೋಡಿ ಸದಸ್ಯರು ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ , ಶ್ರೀ ಕೇಶವ ಪಂಜುರ್ಲಿ ಕೋಡಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು , ಈಶ್ವರ ಗೌಡ ಕಾಮಟ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


