ಡಿಜಿಟಲ್ ಅರೆಸ್ಟ್: ಮಂಗಳೂರಿನ ಮಹಿಳೆಗೆ 1.81 ಕೋಟಿ ರೂ. ವಂಚನೆ

ಮಂಗಳೂರು: ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್​ ಮಾಡಿದ್ದೇವೆ ಎಂದು ನಂಬಿಸಿದ ಖದೀಮರು ಮಹಿಳೆಯ ಬಳಿಯಿದ್ದ 1.81 ಕೋಟಿ ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

58 ವರ್ಷದ ಮಹಿಳೆಗೆ ಅಕ್ಟೋಬರ್ 24 ರಂದು ಮದ್ಯಾಹ್ನ 2.44 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ ಮುಂಬೈ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಮಹಿಳೆಯು ಮನಿ ಲಾಂಡರಿಂಗ್ ಕೇಸ್ ಹಾಗೂ ಹ್ಯೂಮನ್ ಟ್ರಾಫಿಕಿಂಗ್ ಕೇಸ್​ನಲ್ಲಿ ಕಮಿಷನ್ ತೆಗೆದುಕೊಂಡಿರುವುದಾಗಿ ತಿಳಿಸಿ ನೀವು ಸಸ್ಪೆಕ್ಟ್ ಇದ್ದೀರಿ. ತನಿಖೆಯ ಬಗ್ಗೆ ನೀವು ವಿಡಿಯೋ ಕಾಲ್​ನಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾನೆ.

ಇದರಿಂದ ಮಹಿಳೆ ಭಯಭೀತಳಾಗಿ ಅವರು ಮಾಡಿದ ವಿಡಿಯೋ ಕಾಲ್​ನಲ್ಲಿ ಸಂಪರ್ಕದಲ್ಲಿದ್ದರು. ನಂತರ ಮಹಿಳೆಯ ಬಳಿ ಲೆಟರ್ ಬರೆಯಿಸಿಕೊಂಡು ಅದನ್ನು ಅವರ ವಾಟ್ಸ್​ ಆ್ಯಪ್ ನಂಬರ್​ಗೆ ಕಳುಹಿಸಿದ್ದಾರೆ. ನಂತರ ಮತ್ತೊಂದು ನಂಬರ್​ನಿಂದ ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತ ವ್ಯಕ್ತಿಗಳು ತಾವು ಪೊಲೀಸ್ ಅಧಿಕಾರಿಗಳೆಂದು ವಾಟ್ಸ್​ ಆ್ಯಪ್ ವಿಡಿಯೋ ಕರೆ ಮಾಡಿದ್ದಾರೆ. ಅವರು ಮಹಿಳೆಯ ವೈಯಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್​ನ ವಿವರಗಳು ಹಾಗೂ ಬಾಕಿ ಮೊತ್ತವನ್ನೆಲ್ಲ ವಿಚಾರಿಸಿದ್ದಾರೆ.
ಮರುದಿನ ಮಹಿಳೆಗೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಭಯ ಹುಟ್ಟಿಸಿ ಬೆದರಿಕೆ ಹಾಕಿದ್ದಾರೆ. ಇದರಿಂದ ಪಿರ್ಯಾದಿದಾರರು ಸಂಪೂರ್ಣವಾಗಿ ಭಯಭೀತರಾಗಿ ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಅಕ್ಟೋಬರ್​ 28 ರಿಂದ ನವಂಬರ್​ 11ರವರೆಗೆ ಹಂತ ಹಂತವಾಗಿ ಒಟ್ಟು 1,81,50,000 ರೂ.ಗಳನ್ನು RTGS ಮೂಲಕ ವರ್ಗಾವಣೆ ಮಾಡಿದ್ದಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?