ಡಿಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಆರ್​ ಎಸ್​ ಎಸ್​ ಬಗ್ಗೆ ಮಾತನಾಡುವ ನೈತಿಕತೆ ಮತ್ತು ತಿಳುವಳಿಕೆ ಇಲ್ಲ- ಶಾಸಕ ಯಶ್​ಪಾಲ್​ ಸುವರ್ಣ

ಉಡುಪಿ: ಡಿಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಆರ್​ ಎಸ್​ ಎಸ್​ ಬಗ್ಗೆ ಮಾತನಾಡುವ ನೈತಿಕತೆ ಮತ್ತು ತಿಳುವಳಿಕೆ ಇಲ್ಲ. ಅವರು ಮುಖ್ಯಮಂತ್ರಿ ಆಗುವ ಚರ್ಚೆ ನಡೆಯುತ್ತಿದೆ. ಡಿಕೆಶಿಯನ್ನು ಸಿದ್ದರಾಮಯ್ಯ ಮುಂದಿನ ವರ್ಷ ಕಾಂಗ್ರೆಸ್​ನಿಂದ ಹೊರಗೆ ಹಾಕಿದರೆ ಮತ್ತೆ ಗಣವೇಶ ಧರಿಸಿ ಪಥಸಂಚಲನ ನೋಡುವ ಸಂದರ್ಭ ಬರಬಹುದು. ಡಿಕೆಶಿ ಗಣವೇಶ ಧರಿಸುವುದನ್ನು ನೋಡುವ ಭಾಗ್ಯ ಕರುನಾಡಿಗೆ ಸಿಗಬಹುದು ಎಂದು ಶಾಸಕ ಯಶ್​ಪಾಲ್​ ಸುವರ್ಣ ವ್ಯಂಗ್ಯವಾಡಿದ್ದಾರೆ.
ಟೀಕೆ ಮಾಡಿದ ಎಲ್ಲರೂ ಆರ್​ ಎಸ್​ ಎಸ್​ ಒಪ್ಪಿಕೊಂಡಿದ್ದಾರೆ. ಡಿಕೆಶಿ ಆರ್​ ಎಸ್​ ಎಸ್​ಗೆ ಬರುವ ದಿನ ದೂರವಿಲ್ಲ. ಪ್ರಧಾನಿ ನರೇಂದ್ರ ಮೋದಿ ಆರ್​ ಎಸ್​ ಎಸ್​ನವರು. ಅವರನ್ನು ಇಡೀ ಪ್ರಪಂಚ ಒಪ್ಪಿದೆ. ಪ್ರಿಯಾಂಕ ರ್ಖಗೆ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬಂದರೂ ಆರ್​ ಎಸ್​ ಎಸ್​ ಮೇಲೆ ಕ್ರಮ ಸಾಧ್ಯವಿಲ್ಲ. ನಿಷೆೇಧ ಮಾಡುವ ತಾಕತ್ತು ಅವರಿಗಿಲ್ಲ. ಅದು ಸಾಧ್ಯವೂ ಇಲ್ಲ ಎಂದರು.
ರ್ಖಗೆ ಶೈಕ್ಷಣಿಕ ಪ್ರಗತಿಗೆ ಶ್ರಮ ವಹಿಸಲಿ
ಪ್ರಿಯಾಂಕಾ ರ್ಖಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಲಬುರಗಿ ಎಸ್​ ಎಸ್​ ಎಲ್​ ಸಿ ಪಿಯುಸಿ ಲಿತಾಂಶದಲ್ಲಿ ಕೊನೆ ಸ್ಥಾನದಲ್ಲಿದೆ. ಮುಂದಿನ ವರ್ಷ ಪ್ರಥಮ 5 ಸ್ಥಾನವನ್ನು ಪಡೆಯಲು ಪ್ರಯತ್ನಿಸಲಿ. ಆನಂತರ ನೀವು ರಾಜ್ಯದ ಜನಕ್ಕೆ ಪಾಠ ಮಾಡಲು ಬನ್ನಿ. ಮುಸ್ಲಿಮರನ್ನು ಓಲೈಕೆ ಮಾಡುವ ಇಂತಹ ಹೇಳಿಕೆಯನ್ನು ಬಿಡಬೇಕು. ರ್ಖಗೆ ಪತ್ರ ಪರಿಶೀಲಿಸುವ ಮೊದಲು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲಿ. ಸಿಎಂ ಕೂಡ ಇವತ್ತಲ್ಲ ನಾಳೆ ಆರ್​ ಎಸ್​ ಎಸ್​ ಕಾರ್ಯ ಒಪ್ಪುತ್ತಾರೆ ಎಂದರು

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!