

ಮಂಗಳೂರು: ಎಕ್ಸ್ ಪ್ರೆಸ್ ಬಸ್ಸೊಂದು ಹೆದ್ದಾರಿ ಡಿವೈಡರ್ ಏರಿದ ಘಟನೆ ಮಂಗಳೂರು ನಗರದ ಪಣಂಬೂರು ಬೀಚ್ ರಸ್ತೆ ಮುಂಭಾಗದಲ್ಲಿ ಇಂದು ಮಂಜಾನೆಯ ವೇಳೆ ನಡೆದಿದೆ.ಚಾಲಕನ ಅತಿವೇಗದ ಚಾಲನೆಯಿಂದಾಗಿ ಕಾರ್ಕಳದಿಂದ ಮಂಗಳೂರಿಗೆ ಬರುತ್ತಿದ್ದ ಪದ್ಮಾಂಬಿಕ ಎಕ್ಸ್ ಪ್ರೆಸ್ ಬಸ್ ಡಿವೈಡರ್ ಏರಿದೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಚಾಲಕನ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
