
ಪುತ್ತೂರು: ಗೋಕಳ್ಳರ ಅಟ್ಟಹಾಸಕ್ಕೆ ಕಾಂಗ್ರೇಸ್ ನಲ್ಲಿರುವ ಹಿಂದೂಗಳೂ ನೊಂದಿದ್ದು, ಈ ಕಾರಣಕ್ಕೆ ಕಾಂಗ್ರೇಸ್ ಶಾಸಕರೇ ಗೋಕಳ್ಳರ ಕೈ ಕಡಿಯಿರಿ ಎಂದು ಸೂಚನೆ ನೀಡಿದ್ದಾರೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿಕೆ ನೀಡಿದ್ದಾರೆ.

ಗೋಕಳ್ಳರ ಅಟ್ಟಹಾಸ ಇಂದು ಮಿತಿಮೀರುತ್ತಿದೆ. ಇದರಿಂದ ಇಡೀ ಹಿಂದೂ ಸಮಾಜ ಬೇಸತ್ತಿದೆ. ಕಾಂಗ್ರೆಸ್ ಶಾಸಕರ ಮಾತಿನಂತೇ ಹಿಂದೂ ಸಮಾಜ ಮುಂದೆ ಮಾಡಲಿದೆ. ಗೋಕಳ್ಳರ ಹೆಸರಿನಲ್ಲಿ ಯಾರನ್ನೋ ಪೋಲೀಸರು ಬಂಧಿಸಿದ್ದಾರೆ. ಆದರೆ ನಮಗೆ ನೈಜ ಆರೋಪಿಗಳ ಬಂಧನವಾಗಬೇಕು. ಈ ಪ್ರಕರಣದ ಹಿಂದೆ ಸ್ಥಳೀಯರ ಕೈವಾಡವಿದ್ದು, ಇಂತಹ ಘಟನೆಗಳು ಹೀಗೆ ಮುಂದುವರಿದಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಉಪ್ಪಿನಂಗಡಿ ಕಡಂಬಿನಲ್ಲಿ ನಡೆದ ಗೋ ಮಾತಾ ಸಂರಕ್ಷಣಾ ಚಳವಳಿ ಉದ್ಧೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
