ಪುತ್ತೂರು : ಬಿಜೆಪಿ ಮುಖಂಡನ ಪುತ್ರನಿಂದ ಯುವತಿಯ ಪ್ರೀತಿಸಿ ಗರ್ಭಿಣಿ ಮಾಡಿ ವಂಚನೆ ಪ್ರಕರಣ : ಭೂಗತ ಪಾತಕಿ ಕಲಿ ಯೋಗೀಶನಿಂದ ಕರೆ : ಯುವತಿಯನ್ನು ಮದುವೆಯಾಗಿಲ್ಲದ್ದಿದ್ದರೆ ಜೈಲಿನಿಂದ ಬಂದ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ..!

ಪುತ್ತೂರು : ಪುತ್ತೂರಿನಲ್ಲಿ ನಡೆದ ಬಿಜೆಪಿ ಮುಖಂಡನ ಪುತ್ರ ಯುವತಿಯ ಗರ್ಭಿಣಿ ಮಾಡಿ ವಂಚನೆ ಪ್ರಕರಣ ಇದೀಗ ಬೂಗತ ಲೋಕಕ್ಕೆ ತಲುಪಿದೆ.ಭೂಗತ ಪಾತಕಿ ಕಲಿ ಯೋಗೀಶ ಮತ್ತೊಮ್ಮೆ ಸಡ್ಡು ಮಾಡಿದ್ದಾನೆ. ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವ ಪ್ರಕರಣಕ್ಕೆ ಈಗ ಭೂಗತ ಪಾತಕಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬನ ಎಂಟ್ರಿಯಾಗಿದೆ ರಾಜ್ಯದ ಪ್ರತಿಷ್ಠಿತ ಮಾಧ್ಯಮಕ್ಕೆ ಭೂಗತ ಪಾತಕಿ ಕಲಿ ಯೋಗೀಶ ಕರೆ ಮಾಡಿ ಯುವತಿ ಜತೆ ಆರೋಪಿಯ ಮದುವೆ ಮಾಡಿಸಿದ್ದರೆ ಆತ ಜೈಲಿನಿಂದ ಹೊರಬಂದಾಗ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.

ಪ್ರತಿಷ್ಠಿತ ಮಾಧ್ಯಮಕ್ಕೆ ಕರೆಮಾಡಿದ ಆಡಿಯೋ ದಲ್ಲಿ ಬಿಜೆಪಿ ಮುಖಂಡನ ಪುತ್ರನ ಪ್ರಕರಣದ ಬಗ್ಗೆ ನಮಗೂ ದೂರು ಬಂದಿದೆ. ಓರ್ವ ಯುವತಿಯನ್ನು ಗಭಿ೯ಣಿ ಮಾಡಿ ಮೋಸ ಮಾಡಿದ್ದು, ಈಗ ಜೈಲಿನಲ್ಲಿ ಇರಬೇಕು. ಅನ್ಯಾಯವಾಗಿದೆ ಎಂದು ದೂರು ಬಂದಿದೆ. ಸಂತ್ರಸ್ತೆ ಮನೆಯವರ ಪರ ರಾಜಕೀಯದವರು ಯಾರೂ ನಿಲ್ಲುತ್ತಿಲ್ಲ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಿಂದೂ ಅಲ್ಲವೇ? ಅವರ ಬಳಿ ಹಣವಿಲ್ಲ ಅಂತ ಬಿಟ್ಟುಬಿಡುವುದಾ ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂಗತ ಪಾತಕಿ ಕಲಿ ಯೋಗೀಶ ಆಕ್ರೋಶ ಹೊರಹಾಕಿದ್ದು ಕೃಷ್ಣ ಜೆ.ರಾವ್‌ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಗುಂಡು ಹೊಡೆದು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಅಷ್ಟೇ ಅಲ್ಲದೆ, ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧವೂ ಹಾಗೂ ಈ ಪ್ರಕರಣದ ಆರೋಪಿಗೆ ಬೆನ್ನೆಲುಬಾಗಿ ನಿಂತವರ ಮೇಲೂ ಆಕ್ರೋಶ ಹೊರಹಾಕಿದ್ದಾನೆ.

News Editor

Learn More →

Leave a Reply

Your email address will not be published. Required fields are marked *