
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದಿನಾಂಕ 5.7.2025ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಪ್ರಮುಖರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಕೃಷ್ಣ ಪ್ರಸಾದ್ ಆಳ್ವ ಹಾಗೂ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿಯವರು ಭಾಗವಹಿಸಿ ಎಸ್ ಟಿ ಘಟಕಕ್ಕೆ ಎರಡನೇ ಬಾರಿಗೆ ಮರು ಆಯ್ಕೆ ಮಾಡಲಾದ ಅಧ್ಯಕ್ಷರಾದ ಶ್ರೀ ಮಹಾಲಿಂಗ ನಾಯ್ಕ ರವರಿಗೆ ಅದಿಕಾರ ಪತ್ರ ಹಸ್ತಾಂತರಿಸಿದರು.
ಬಳಿಕ ನೂತನ ಅಧ್ಯಕ್ಷರು ಉಪಸ್ಥಿತರಿ ದ ಎಸ್ ಟಿ ಘಟಕದ ಪ್ರಮುಖರೊಂದಿಗೆ ಸಭೆ ನಡೆಸಿ ಪದಗ್ರಹಣ ಸಮಾರಂಭ ನಡೆಸುವ ಬಗ್ಗೆ ಚರ್ಚಿಸಿದರು.
ದಿನಾಂಕ 20.7.2025.ರಂದು ಎಸ್ ಟಿ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸಭೆ ಮಾನ್ಯ ಶಾಸಕರ ಹಾಗೂ ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ರವರ ಉಪಸ್ಥಿತಿಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಈ ಬಗ್ಗೆ ಎಲ್ಲರ ಸಹಕಾರವನ್ನು ಅಧ್ಯಕ್ಷರು ಕೋರಿದರು.


