
ವರ್ಕಾಡಿ ನಲ್ಲಂಗಿಯಲ್ಲಿ ರಾತ್ರಿ ವೇಳೆ ತಾಯಿಗೆ ಬೆಂಕಿ ಹಚ್ಚಿ ಕೊಂದು, ಬಳಿಕ ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ದಾರುಣ ಘಟನೆಯಲ್ಲಿ ತಾಯಿ ಮೃತಪಟ್ಟಿದ್ದು, ನೆರೆಮನೆಯ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಜೇಶ್ವರ, ಜೂನ್ 26: ವರ್ಕಾಡಿ ನಲ್ಲಂಗಿಯಲ್ಲಿ ರಾತ್ರಿ ವೇಳೆ ತಾಯಿಗೆ ಬೆಂಕಿ ಹಚ್ಚಿ ಕೊಂದು, ಬಳಿಕ ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ದಾರುಣ ಘಟನೆಯಲ್ಲಿ ತಾಯಿ ಮೃತಪಟ್ಟಿದ್ದು, ನೆರೆಮನೆಯ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಮಹಿಳೆಯನ್ನು ಲೂಯಿಸ್ ಮೊಂತೇರೋ ಅವರ ಪತ್ನಿ ಹಿಲ್ಡಾ ಮೊಂತೇರೋ (60) ಎಂದು ಗುರುತಿಸಲಾಗಿದೆ. ಆರೋಪಿ ಅವರ ಪುತ್ರ ಮೆಲ್ವಿನ್ ಮೊಂತೇರೋ (33). ಗಾಯಗೊಂಡಿರುವ ನೆರೆಮನೆಯ ಮಹಿಳೆ ವಿಕ್ಟರ್ ಅವರ ಪತ್ನಿ ಲೊಲಿಟಾ (30), ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.


