
ಬಂಟ್ವಾಳ : ಬಂಟ್ವಾಳದಲ್ಲಿ ಯುವಕನ ಮೇಲೆ ತಲ್ವಾರ್ ದಾಳಿ ನಡೆದಿದೆ ಎಂಬ ಮಾಹಿತಿ ದೊರೆತಿದೆ .ದಾಳಿಗೊಳಗಾದವನನ್ನು ಕೊಳತ್ತಮಜಲ್ ರಹೀಂ ಎಂದು ತಿಳಿದು ಬಂದಿದೆ.

ಈತ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ.
ರಹೀಮ್ ಜೊತೆ ಇನ್ನೊಬ್ಬ ಕೂಡ ಇದ್ದು ಆತನಿಗೂ ಕಡಿಯಲಾಗಿದೆ.ಆದರೆ ಆತನಿಗೆ ಕೈಗೆ ಗಾಯ ವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಬೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.


