ಮಂಡ್ಯ: ವಾಹನ ತಪಾಸಣೆ ವೇಳೆ ಮಗು ಸಾವು ಪ್ರಕರಣ: ಮೂವರು ಎಎಸ್‌ಐಗಳು ಸಸ್ಪೆಂಡ್!

ಮೂವರು ಎಎಸ್​ಐಗಳ ಸಸ್ಪೆಂಡ್: ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಷ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಬೈಕ್​ನಿಂದ ಬಿದ್ದವರ ಮೇಲೆ ಕ್ಯಾಂಟರ್​ ಹರಿದಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಈ ಸಂಬಂಧ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯ ಮೂವರು ಎಎಸ್‌ಐಗಳಾದ ಜಯರಾಮ್‌, ನಾಗರಾಜು ಹಾಗೂ ಗುರುದೇವ್‌ ಎಂಬುವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಎಸ್​ಪಿ ತಿಳಿಸಿದರು

ವಾಹನ ತಪಾಸಣೆ ವೇಳೆ ಬೈಕ್​ನಿಂದ ಸವಾರರು ಕೆಳಗೆ ಬಿದ್ದ ಪರಿಣಾಮ ಮೂರು ವರ್ಷದ ಮಗುವಿನ ಮೇಲೆ ಕ್ಯಾಂಟರ್​ ಹರಿದು ದುರಂತ ಸಂಭವಿಸಿದೆ.

ಮಂಡ್ಯ: ಹೆಲ್ಮೆಟ್​ ತಪಾಸಣೆಯ ವೇಳೆ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆಯೇ ಬೈಕ್​ ಸವಾರ ಮತ್ತು ಅವರೊಂದಿಗಿದ್ದ ಮಗು ಆಯತಪ್ಪಿ ಕೆಳಗೆ ಬಿದ್ದುದ್ದರು. ಈ ವೇಳೆ ಮಗುವಿನ ಮೇಲೆ ಕ್ಯಾಂಟರ್​ ಹರಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸ್ವರ್ಣಸಂದ್ರದ ಬಳಿ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ಎಂಬ ದಂಪತಿ ತಮ್ಮ ಮೂರೂವರೆ ವರ್ಷದ ಮಗು ಹೃತೀಕ್ಷಳಿಗೆ ನಾಯಿ ಕಡಿದಿದೆ ಎಂದು ಬೈಕ್​​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್​ ಸಹಿತ ಅದರಲ್ಲಿದ್ದವರು ಆಯತಪ್ಪಿ ಬಿದ್ದರು. ಆಗ ಹಿಂದಿನಿಂದ ಬರುತ್ತಿದ್ದ ಕ್ಯಾಂಟರ್​ವೊಂದು ಮಗವಿನ ಮೇಲೆ ಹರಿದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ತಮ್ಮ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಮಗವಿನ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಮಂಡ್ಯದ ಸ್ವರ್ಣಸಂದ್ರ ಬಳಿ ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್​ನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಬೈಕ್​ನಲ್ಲಿದ್ದ ದಂಪತಿ ಮತ್ತು ಮಗು ಆಯತಪ್ಪಿ ಕೆಳಗೆ ಬಿದ್ದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.


ಘಟನೆ ಖಂಡಿಸಿ ಮಗುವಿನ ಪೋಷಕರು ಮತ್ತು ಸಾರ್ವಜನಿಕರು ಮಂಡ್ಯ ಜಿಲ್ಲಾ ಆಸ್ಪತ್ರೆಯ ಮುಂಭಾಗದ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮೂವರು ಎಎಸ್​ಐಗಳ ಸಸ್ಪೆಂಡ್: ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಷ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಬೈಕ್​ನಿಂದ ಬಿದ್ದವರ ಮೇಲೆ ಕ್ಯಾಂಟರ್​ ಹರಿದಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಈ ಸಂಬಂಧ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯ ಮೂವರು ಎಎಸ್‌ಐಗಳಾದ ಜಯರಾಮ್‌, ನಾಗರಾಜು ಹಾಗೂ ಗುರುದೇವ್‌ ಎಂಬುವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಎಸ್​ಪಿ ತಿಳಿಸಿದರು.

News Editor

Learn More →

Leave a Reply

Your email address will not be published. Required fields are marked *