ಮಂಗಳೂರು : ಅಮಾಯಕ ಹಿಂದೂ ಯುವಕರ ಬಂಧನವಾದರೆ ಪೊಲೀಸ್ ಠಾಣೆಗೆ ಮುತ್ತಿಗೆ – ಶಾಸಕ ಭಾರತ್ ಶೆಟ್ಟಿ.

ಮಂಗಳೂರು : ಇತ್ತೀಚಿಗೆ ಕಾಂಗ್ರೆಸ್ ಗೆ ಪಾಕಿಸ್ತಾನ ದ ಮೇಲೆ ಪ್ರೀತಿ ಹೆಚ್ಚಾಗಿದೆ, ರಾಜ್ಯದಲ್ಲಿ ರಸ್ತೆಯಲ್ಲಿ ಪಾಕಿಸ್ತಾನದ ಧ್ವಜ ಚಿತ್ರಿಸಿದಕ್ಕೆ ಕೇಸು ಕೂಡ ದಾಖಲಿಸುತ್ತಾರೆ ಅದರಂತೆಯೇ ಕುಡುಪುವಿನ ಕ್ರಿಕೆಟ್ ಆಡುವ ಸಂಧರ್ಭದಲ್ಲಿ ಇದೇ ಆಗಿದೆ ಎಂದು ಮಾಜಿ ಶಾಸಕ ಬೇಕಾಬಿಟ್ಟಿ ಆರೋಪಿಸಿದ್ದಾರೆ, ಭಾರತ ದೇಶದ ವಿರೋಧ ವಿಚಾರದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುವಂತವರು ಕೂಡ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಮಂಗಳೂರು ಉತ್ತರ ವಲಯದ ಶಾಸಕ ಭಾರತ್ ಶೆಟ್ಟಿ ಯವರು ಆಕ್ರೋಶ ಹೊರಹಾಕಿದ್ದಾರೆ.

ಹಿಂದೂಗಳನ್ನು ಗುಂಡಿಟ್ಟು ಕೊಂಡ ಸಂಧರ್ಭದಲ್ಲಿ ಮೌನ ತಾಳಿರುವ ಜಿಲ್ಲೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವನನ್ನು ಹತ್ಯೆ ಮಾಡಿದಕ್ಕೆ ಬೆಂಬಲ ನೀಡುತ್ತದೆ. ಈ ವ್ಯಕ್ತಿ ಯಾಕೆ ಬಂದ,ಇತನ ಚರಿತ್ರೆ ಏನೂ ಎಂಬುಂದನ್ನು ತಿಳಿಯುವುದು ಬಿಟ್ಟು ಮಾನಸಿಕ ಅಶ್ವಸ್ಥ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಾರೆ, ಮತಬ್ಯಾಂಕಿನ ರಾಜಕಾರಣಕ್ಕೆ ಇಂತಹ ನೀಚ ಕೆಲಸ ಮಾಡುತ್ತಿರುವುದು ಕೆದಕರ ಎಂದರು‌.

“ದೇಶದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಈ ಮಧ್ಯೆ ದೇಶದ ಒಳಗಡೆ ಇದ್ದುಕೊಂಡು ಉಗ್ರರಿಗೆ ಬೆಂಬಲ ನೀಡುವ ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಜನರ ಆಕ್ರೋಶ ಕೂಡಾ ಹೆಚ್ಚಿದೆ. ಮುಂಬೈಯಲ್ಲಿ ಪಾಕಿಸ್ತಾನದ ಬಾವುಟ ಹಾಕಿದ್ದಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಮ್ಮ ರಾಜ್ಯದಲ್ಲೂ ಇದೇ ಕಾರಣಕ್ಕೆ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆದಿದೆ. ಈ ಸಮಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಯಾರೂ ಸುಮ್ಮನಿರುವುದಿಲ್ಲ. ಕುಡುಪು ಬಳಿ ನಡೆದ ಘಟನೆಯೂ ಇದೇ ರೀತಿ ಆಗಿದೆ. ಈ ಘಟನೆಯಲ್ಲಿ ಬಿಜೆಪಿಯ ರವೀಂದ್ರ ಎಂಬವರೇ ಪ್ರಧಾನ ಆರೋಪಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ ನಿರ್ಣಯ ಮಾಡಿಕೊಂಡಿದ್ದಾರೆ. ಅಲ್ಲಿ ಹಲ್ಲೆ ಮಾಡಿದ್ದು ಹಿಂದುಗಳೇ ಮುಸ್ಲಿಮರೇ ಗೊತ್ತಿಲ್ಲ ಒಟ್ಟಾರೆ ಆಕ್ರೋಶದಿಂದ ಈ ಘಟನೆ ನಡೆದಿದೆ. ಇದನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖೇದಕರ ವಿಚಾರ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ”ಪೊಲೀಸರು ಸರಕಾರದ ಆದೇಶಕ್ಕೆ ಮಣಿದು ನಮಗೆ ಇಷ್ಟು ಜನ ಕೊಡಿ ಅಷ್ಟು ಜನ ಕೊಡಿ ಎನ್ನುತ್ತಿದ್ದಾರೆ ಅದೆಂತ ಈರುಳ್ಳಿ ಕೊಡೋದ? ಸತ್ತವನು ಯಾರು ಅವನ ಹಿನ್ನೆಲೆ ಏನು ಎನ್ನುವುದನ್ನು ತಿಳಿಯದೆ ಅವನು ಮಾನಸಿಕ ಅಸ್ವಸ್ಥ ಎಂದು ಕರೆಯುತ್ತಾರೆ. ಇದೇ ಕಾಂಗ್ರೆಸಿಗರು ಹಿಂದೆ ಮಸೀದಿ ಮುಂದೆ ಹಿಂದೂಗಳ ಮೇಲೆ ಹಲ್ಲೆ ನಡೆದಾಗ ಎಲ್ಲಿದ್ದರು? ವೈದ್ಯೆ ಹಿಂದೂ ವಿರೋಧಿ ಹೇಳಿಕೆ ಕೊಟ್ಟಾಗ ಎಲ್ಲಿದ್ದರು ಎಂದು ಕಿಡಿಕಾರಿದರು. ಅಮಾಯಕ ಹಿಂದೂ ಯುವಕರ ಬಂಧನವಾದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಅಥವಾ ಇತರ ಗಂಭೀರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ‌ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಯತೀಶ್ ಆಳ್ವ, ಸಂದೀಪ್ ಪಚ್ಚನಾಡಿ, ಲೋಹಿತ್ ಅಮೀನ್, ಮನೋಹರ್ ಶೆಟ್ಟಿ, ಅಶ್ರಿತ್ ನೋಂಡ, ರಣ್ ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *