
ಮಂಗಳೂರು: ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಡಯಾಟೀಷನ್ ಅಫೀಫಾ ಫಾತೀಮ ವಿವಾದಾತ್ಮಕ ಪೋಸ್ಟ್ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿತ್ತು. ಪೋಸ್ಟ್ ಹಿನ್ನೆಲೆ ಸುಮೋಟೋ ಕೇಸ್ ದಾಖಲಿಸಿ ಆಸ್ಪತ್ರೆಯ ಗಮನಕ್ಕೆ ತಂದಿದ್ದೇವೆ ಎಂದರು.
ಅಫೀಫಾನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದೇವೆ. ಅಗತ್ಯ ಇದ್ರೆ ಮತ್ತೆ ಕರೆಸುತ್ತೇವೆ, ವಿಚಾರಣೆ ನಡೆಸುತ್ತೇವೆ. ಅಫೀಪಾ ವಿರುದ್ಧ BNS ಕಲಂ 196(1)(a), 353(2) ಅಡಿಯಲ್ಲಿ FIR ದಾಖಲಾಗಿದೆ. ಅಫೀಪಾ ಸಾಮಾಜಿಕ ಜಾಲತಾಣ X ನಲ್ಲಿ ಹಿಂದೂ ಧರ್ಮ ಹಾಗೂ ದೇಶ ವಿರೋಧಿ ಪೋಸ್ಟ್ ಮಾಡಿದ್ದಳು ಎಂದರು.


