
ಪುತ್ತೂರು ನಗರಸಭೆಯು ಸಾಹಸ ಸರಕಾರೇತರ ಸಂಸ್ಥೆ ಬೆಂಗಳೂರು ಇದರ ಸಹಯೋಗದೊಂದಿಗೆ HDB Financial Services ಇವರ ಆರ್ಥಿಕ ನೆರವಿನ ಮೂಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ದಿನಾಂಕ 15/04/2025 ರ ಪೂರ್ವಹ್ನ 11.00 ಗಂಟೆಗೆ ಸ್ಥಾಪಿಸಲಾಯಿತು. ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಮಾನ್ಯ ಮಾಜಿ ಶಾಸಕರು ಸಂಜೀವ ಮಟಂದೂರು ಚಾಲನೆ ನೀಡಿ, ಸ್ವಚ್ಛತೆಗೆ ಪುತ್ತೂರು ನಗರಸಭೆ ಸಹಕಾರ ನೀಡುತ್ತಿರುವ ಬಗ್ಗೆ ಕೃತಜ್ಞತೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ನಗರಸಭೆಯ ಮಾನ್ಯ ಅಧಕ್ಷರಾದ ಶ್ರೀಮತಿ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷರಾದ ಬಾಲಚಂದ್ರ ಕೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಳಪ್ಪ ಯಾನೆ ಸುಂದರ್ ಪೂಜಾರಿ ಬಡಾವು, ಸದಸ್ಯರಾದ ರಮೇಶ್ ರೈ, ರೋಬಿನ್, ಯುಸೋಫ್, ಮಾಜಿ ನಗರಸಭಾ ಸದಸ್ಯರಾದ ಮುಖೇಶ್, ನಗರಸಭೆಯ ಪೌರಯುಕ್ತರು ಮಧು ಸ್ ಮನೋಹರ್, ನಗರಸಭೆ ಹಿರಿಯ ಅರೋಗ್ಯ ನಿರೀಕ್ಷಿಕರಾದ ಶ್ರೀಮತಿ ಶ್ವೇತಾಕಿರಣ್, ಬಸ್ ನಿಲ್ದಾಣದ ವ್ಯವಸ್ಥಾಪಕರು ಸುಬ್ರಮಣ್ಯ, ಬಸ್ ನಿಲ್ದಾಣದ ಸಿಬ್ಬಂದಿಗಳು, ಸಾಹಸ ಸಂಸ್ಥೆಯ ಸಹಾಯಕ ಯೋಜನಾ ಸಂಯೋಜಕರು ಅನಂತ ದೇಶಭಂಡಾರಿ, ಮೇಲ್ವಿಚಾರಕರು ಸಿದ್ದಪ್ಪ ವಡೇರ, ಹಾಗೂ ಗಣೇಶ್ ಉಪಸ್ಥಿತರಿದ್ದರು.

ನಗರಸಭೆಯ ಮಾನ್ಯ ಪೌರಯುಕ್ತರು ಮಧು. ಸ್. ಮನೋಹರ್ ಎಲ್ಲರನ್ನು ಸ್ವಾಗತಿಸಿ – ವಂದಿಸಿದರು.


