
ಉಳ್ಳಾಲ: ಆಕ್ಟಿವಾ ಸ್ಕೂಟರಿನಲ್ಲಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ತಡೆಹಿಡಿದ ಹಿಂದೂ ಸಂಘಟನೆ ಯುವಕರ ತಂಡ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲವು ಕೆ.ಜಿಯಲ್ಲಿ ಗೋಣಿಚೀಲದಲ್ಲಿ ಕೇರಳದ ಹೊಸಂಗಡಿ ಕಡೆಯಿಂದ ಚೆಂಬುಗುಡ್ಡೆ ಕಡೆಗೆ ಸಾಗಾಟ ನಡೆಸುತ್ತಿದ್ದಾಗ ಕೋಟೆಕಾರ್ ಸಮೀಪ ತಡೆಹಿಡಿದಿದ್ದಾರೆ. ವಿಚಾರಿಸಿದಾಗ ಚೆಂಬುಗುಡ್ಡೆ ಕಡೆಗೆ ದನದ ಮಾಂಸ ಮಾರಾಟ ಮಾಡಲು ತೆರಳುತ್ತಿರುವುದಾಗಿ ತಿಳಿದುಬಂದಿದೆ. ಬಳಿಕ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಕೂಟರ್ ಸವಾರ ಚೆಂಬುಗುಡ್ಡೆ ನಿವಾಸಿ ಎಂ.ಸಿ ಬಾವಾ ಎಂದು ತಿಳಿದುಬಂದಿದ್ದು, ಈ ಹಿಂದೆಯೂ ದನದ ಮಾಂಸ ವ್ಯಾಪಾರ ನಡೆಸುತ್ತಿದ್ದನೆಂದು ತಿಳಿದುಬಂದಿದೆ.



