ಮಂಗಳೂರು : ಫೆ.22 ರಂದು ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ತುಳು ಒಕ್ಕೂಟದಿಂದ ” ಮಾಹಿದ ಮಹಕೂಟ” ಸಮಾರಂಭ…!

ಮಂಗಳೂರು ; ತುಳುಭಾಷೆ ಸಂಸ್ಕೃತಿ ಅಭಿವೃದ್ಧಿ, ಸಂಪ್ರದಾಯ ನೆಲೆಯಲ್ಲಿ ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಥಾಪನೆಯಾಗಿದೆ. ದೇಶ-ವಿದೇಶದಲ್ಲಿ ಸುಮಾರು 48 ತುಳು ಸೇವಾ ಸಂಘ-ಸಂಸ್ಥೆಗಳು ಒಕ್ಕೂಟದ ಸದಸ್ಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ತುಳು ಭಾಷೆ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ/ಸಮ್ಮೇಳನ ಸಮಾರಂಭ ನಿರಂತರವಾಗಿ ನಡೆಸಿ ತುಳುಭಾಷೆ ಮಾನ್ಯತೆಗೆ ಗಮನ ಸೆಳೆಯುತ್ತಿದೆ ಎಂದು ನವನೀತ್ ಶೆಟ್ಟಿ ಕದ್ರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅಗಸ್ಟ್ 24ರಂದು ಒಕ್ಕೂಟದ ವತಿಯಿಂದ “ತುಳುನಾಡ ಜಾನಪದ ಉಚ್ಚಯ 2024” ಕಾರ್ಯಕ್ರಮವನ್ನು ನಡೆಸಿ ಇದರಲ್ಲಿ ತುಳುವೆರ ದಿಬ್ಬಣ, ಪೆರ್ಮೆದ ತುಳುವೆ ಪ್ರಶಸ್ತಿ, ಗಿಡ್ಡೆರು ಮಾನಾದಿಗೆ, ಅಕಾಡೆಮಿಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಹಲವಾರು ಅತಿಥಿ ಗಣ್ಯರ ಉಪಸ್ಥಿತಿ ಬಹಳ ವಿಜೃಂಭನೆಯಿಂದ ಜರಗಿಸಲಾಗಿದೆ ಎಂದರು.

ಸಂಘಟನೆಯ ಬಲವರ್ಧನೆಯ ನಿಟ್ಟಿನಲ್ಲಿ ಫೆಬ್ರವರಿ 22, ಶನಿವಾರದಂದು ಅಪರಾಹ್ನ ಗಂಟೆ 3.30ರಿಂದ ಅಂಬೇಡ್ಕರ್ ಭವನ ಉರ್ವಾಸ್ಟೋರ್‌ನಲ್ಲಿ ಜರಗಲಿರುವ “ಮಾಯಿದ ಮಹಾಕೂಟ” ಸಮಾರಂಭವನ್ನು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುದೇವದತ್ತ ಸಂಸ್ಥಾನ ಶ್ರೀ ದತ್ತಾಂಜನೇಯ ಕ್ಷೇತ್ರ ಒಡಿಯೂರ್‌ರವರು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಯು.ಟಿ.ಖಾದರ್, ಸಭಾಪತಿ ಕರ್ನಾಟಕ ಸರಕಾರ ಮತ್ತು ಡಾ॥ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಲೆಫ್ಟಿನೆಂಟ್ ಜನರಲ್ ಅಂಬಾಸಿಡರ್, ಉದ್ಯಮಿ, ಸಮಾಜ ಸೇವಕ, ವಾಗ್ನಿ, ತ್ರಿಭಾಷಾ ಚಿತ್ರ. ನಿರ್ಮಾಪಕ ಹಾಗೂ ಅವರ ಪತ್ನಿ ಶ್ರೀಮತಿ ಆಲೀಸ್ (ಕೊರೆಯಾ) ಫೆರ್ನಾಂಡಿಸ್‌ರವರು ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಎ.ಸಿ. ಭಂಡಾರಿಯವರು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ

News Editor

Learn More →

Leave a Reply

Your email address will not be published. Required fields are marked *