
ಕಳೆದ 13 ವರ್ಷಗಳಿಂದ ತುಳು ಪತ್ರಿಕಾ ಕ್ಷೇತ್ರದಲ್ಲಿ ಟೈಮ್ಸ ಆಫ್ ಕುಡ್ಲ ಎನ್ನುವ ಯಶಸ್ವೀ ಪತ್ರಿಕೆಯನ್ನು ನಡೆಸಿ ಕೊಂಡು ಬಂದರು, ತುಳುವಿನ ಅಬಿವೃದ್ದಿಗೆ ಪ್ರಾಮಾಣಿಕವಾಗಿ ದುಡಿದು ತುಳುವರ ಹೋರಾಟಕ್ಕೆ ಯಾವಾಗಲೂ ಬೆನ್ನೆಲುಬಾಗಿ ನಿಂತ ಹೆಮ್ಮೆಯ ತುಳುವ ಶಶಿರಾಜ್ ಬಂಡಿಮಾರ್ ನಿಧನ ಹೊಂದಿದರು ಎನ್ನುವ ಬೇಸರದ ಸಂಗತಿ ತಿಳಿದು ಬಂದಿದೆ.
ಮೂಲಗಳ ಪ್ರಕಾರ ಅವರು ಬಾರತ ಈಶಾನ್ಯಾ ದಲ್ಲಿ ಇರುವ ರಾಜ್ಯ ನಾಗಲ್ಯಾಂಡ್ ಗೆ ಹೋಗಿದ್ದರು ,ಅಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ನಿಧನ ಹೊಂದಿದರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ.



