ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ಉಪನ್ಯಾಸಕಿ ಮೃತ್ಯು.

ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಮೃತಪಟ್ಟಿದ್ದಾರೆ.

ನಗರದ ಸಂತ ಅಲೋಶಿಯಸ್‌ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್‌(23) ಮೃತಪಟ್ಟವರು.

ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.
ಅನಾಫಿಲ್ಯಾಕ್ಟಿಕ್‌ ರಿಯಾಕ್ಷನ್‌ ಗ್ಲೋರಿಯಾ ಅವರಿಗೆ ಫ‌ುಡ್‌ ಅಲರ್ಜಿ(ಅನಾಫಿಲ್ಯಾಕ್ಟಿಕ್‌ ರಿಯಾಕ್ಷನ್‌) ಸಮಸ್ಯೆ ಇತ್ತು. ಇದರಿಂದಾಗಿ ಈ ಹಿಂದೆಯೂ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಬಳಿಕ ಚೇತರಿಸಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಿಧನರಾದ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ಅವರ ಅಂಗಾಂಗಳನ್ನು ಆಸ್ಪತ್ರೆಯಲ್ಲಿ ವಿವಿಧ ಸ್ವೀಕೃತದಾರರಿಗೆ ರವಾನಿಸಲಾಗಿದೆ. ಮೃತರ ಕುಟುಂಬದ ಒಪ್ಪಿಗೆಯಂತೆ ಅಂಗಾಂಗ ದಾನ ಮಾಡಲಾಯಿತು.

News Editor

Learn More →

Leave a Reply

Your email address will not be published. Required fields are marked *