
ಮುಮ್ತಾಝ್ ಅಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್ ಸೇರಿದಂತೆ, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನನ್ನ ಸಹೋದರ ಮುಮ್ತಾಝ್ ಅಲಿ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದು, ಅವರ ಪ್ರಸಿದ್ಧಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದನೆ ನೀಡಿದ್ದಾರೆ ಎಂದು ಹೈದರ್ ಅಲಿ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ರೆಹಮತ್ ಎಂಬವರು ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತೇನೆ ಎಂದು ಹೆದರಿಸಿ 2024 ರ ಜುಲೈ ಯಿಂದ ಇದುವರೆಗೂ 50 ಲಕ್ಷ ರೂ.ಗಿಂತಲು ಅಧಿಕ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆದರಿಸಿ 25 ಲಕ್ಷ ರೂ. ಹಣವನ್ನು ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೈದರ್ ಅಲಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ
ಭಾನುವಾರ ನಸುಕಿನ ಜಾವ ನಿಗೂಢವಾಗಿ ಕಣರೆಯಾಗಿರುವ ಮಾಜಿ ಶಾಸಕ ಮೋಯಿದ್ದಿನ್ ಬಾವ ಹಾಗೂ ಎಂ ಎಲ್ ಸಿ, ಜೆಡಿಎ ಉಪಾಧ್ಯಕ್ಷ ಬಿ ಎಂ ಫಾರೂಕ್ ಸಹೋದರ ಕೃಷ್ಣಾಪುರದ ಶೈಕ್ಷಣಿಕ ಮುಂದಾಳು, ಮಸೀದಿ ಮುಖಂಡ, ಉದ್ಯಮಿ ಬಿ.ಎಂ.ಮುಮ್ತಾಜ್ ಆಲಿ (52) ಅವರ ಸುಳಿವು 24 ಗಂಟೆ ಕಳೆದರೂ ಸಿಕ್ಕಿಲ್ಲ . ಇದೀಗ ಅವರ ನಾಪತ್ತೆ ಸುತ್ತ ಹಲವು ಅನುಮಾನಗಳು , ಊಹಾಪೂಹಗಳು ವದಂತಿಗಳು ಸೃಷ್ಟಿಯಾಗಿದೆ.
ಕೆಂದು ರೆಹಮತ್ ಅವರೊಂದಿಗೆ ಸೇರಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಲಾಗಿದೆ.
ರೆಹಮತ್ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡುವುದಾಗಿ ಬೆದರಿಸಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾ, ನಿರಂತರ ಕಿರುಕುಳ ನೀಡಿ ಹಣವನ್ನು ನೀಡದಿದ್ದರೆ ಕೊಲೆ ಮಾಡುವುದಾಗಿ ಆರೋಪಿಗಳು ಹೆದರಿಸಿದ್ದರು. ಕುಟುಂಬದ ಸದಸ್ಯರಿಗೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರರಾಗಿರುವ ಮುಮ್ತಾಝ್ ಅಲಿ ಅವರು ರವಿವಾರ ಬೆಳಗ್ಗಿನ ಜಾವದಿಂದ ನಾಪತ್ತೆಯಾಗಿದ್ದಾರೆ. ಅವರ ಕಾರು ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಎನ್ ಡಿ ಆರ್ ಎಫ್, ಎಸ್ಡಿ ಆರ್ ಎಫ್ ಹಾಗೂ ಕೋಸ್ಟ್ ಗಾರ್ಡ್ ತಂಡದ ಸಹಾಯದಿಂದ ಶೋಧಕಾರ್ಯ ನಡೆದಿದೆ. ಕುಟುಂಬದ ವಾಟ್ಸಾಪ್ ಗ್ರೂಪ್ ನಲ್ಲಿ ವಾಯ್ಸ್ ಮೆಸೇಜು ಹಾಕಿ ನಾಪತ್ತೆಯಾಗಿರುವ ಮುಮ್ತಾಝ್ ಅಲಿಯವರು ಇದುವರೆಗೂ ಪತ್ತೆಯಾಗಿಲ್ಲ
ಭಾನುವಾರ ನಸುಕಿನ ಜಾವ ನಿಗೂಢವಾಗಿ ಕಣರೆಯಾಗಿರುವ ಮಾಜಿ ಶಾಸಕ ಮೋಯಿದ್ದಿನ್ ಬಾವ ಹಾಗೂ ಎಂ ಎಲ್ ಸಿ, ಜೆಡಿಎ ಉಪಾಧ್ಯಕ್ಷ ಬಿ ಎಂ ಫಾರೂಕ್ ಸಹೋದರ ಕೃಷ್ಣಾಪುರದ ಶೈಕ್ಷಣಿಕ ಮುಂದಾಳು, ಮಸೀದಿ ಮುಖಂಡ, ಉದ್ಯಮಿ ಬಿ.ಎಂ.ಮುಮ್ತಾಜ್ ಆಲಿ (52) ಅವರ ಸುಳಿವು 24 ಗಂಟೆ ಕಳೆದರೂ ಸಿಕ್ಕಿಲ್ಲ . ಇದೀಗ ಅವರ ನಾಪತ್ತೆ ಸುತ್ತ ಹಲವು ಅನುಮಾನಗಳು , ಊಹಾಪೂಹಗಳು ವದಂತಿಗಳು ಸೃಷ್ಟಿಯಾಗಿದೆ
ಪ್ರಕರಣವು ಸಮಯ ಕಳೆದಂತೆ ಕ್ಲಿಷ್ಟಕರವಾಗಿ ಸಾಗುತ್ತಿದ್ದು, ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಪ್ರಕರಣದ ಹಿಂದೆ ಮೂವರು ಯುವಕರು ಹಾಗೂ ಒರ್ವ ಯುವತಿ ಕೈವಾಡ ಇರುವ ಕುರಿತು ಪೊಲೀಸರಿಗೆ ಶಂಕೆ ಮೂಡಿದೆ. ಈ ಹಿನ್ನಲೆಯಲ್ಲಿ ಮೂವರು ಯುವಕರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವತಿಯು ಸುರತ್ಕಲ್ ನ ಕೃಷ್ಣಾಪುರ ನಿವಾಸಿ ಎಂದು ಹೇಳಲಾಗುತ್ತಿದ್ದು, ಬಿ.ಎಂ.ಮುಮ್ತಾಜ್ ಆಲಿ ನಾಪತ್ತೆಯಾದ ಬಳಿಕ ಆ ಯುವತಿಯು ಕಣ್ಮರೆಯಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಮುಮ್ತಾಜ್ ಅವರು ನಗರದ ಕದ್ರಿ ಆಲ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್ ಅಪಾರ್ಟ್ಮೆಂಟ್ ಸಮುಚ್ಚಯದ ಮನೆಯಿಂದ ರಾತ್ರಿ 3 ಗಂಟೆ ಸುಮಾರಿಗೆ ಹೊರಟಿದ್ದರು. ಅವರು ಅಷ್ಟು ತಡ ರಾತ್ರಿ ಎದ್ದು ಒಬ್ಬರೇ ಅಷ್ಟು ತರಾತುರಿಯಲ್ಲಿ ಹೊರಟ್ಟದ್ದು ಎಲ್ಲಿಗೆ ಅನ್ನುವ ಮಾಹಿತಿ ಕುಟುಂಬ ಸದಸ್ಯರಿಗೂ ಇಲ್ಲ ಎನ್ನಲಾಗುತ್ತಿದೆ. ಮುಂಜಾನೆ 3.30ರ ಸುಮಾರಿಗೆ ಅವರ ಕುಟುಂಬದ ಸದಸ್ಯರ ವಾಟ್ಸ್ಆಯಪ್ ಬಳಗಕ್ಕೆ ಧ್ವನಿಮುದ್ರಿತ ಸಂದೇಶವನ್ನು ಕಳುಹಿಸಿದ್ದರು. ಅದರಲ್ಲಿ ಮಕ್ಕಳನ್ನು ಉದ್ದೇಶಿಸಿ, ‘ನೀವು ಚೆನ್ನಾಗಿರಿ. ನಾನಿನ್ನು ಬದುಕಿರುವುದಿಲ್ಲ’ ಎಂದು ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಮಗಳು ಹಾಗೂ ಸ್ನೇಹಿತರೊಬ್ಬರಿಗೆ ಈ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ
ಮನೆಯವರು ಬೆಳಿಗ್ಗೆ 4.40ರ ಸುಮಾರಿಗೆ ಆ ಸಂದೇಶವನ್ನು ನೋಡಿದ್ದು ತಕ್ಷಣವೇ ಮಗಳು ತಂದೆಯನ್ನು ಹುಡುಕಲು ಶುರುಹಚ್ಚಿಕೊಂಡಿದ್ದರು. ಈ ವೇಳೆ ಕೂಳೂರು ಸೇತುವೆಯಲ್ಲಿ ಅವರ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಮುಂಭಾಗ ಹಾನಿಗೊಂಡಿತ್ತು. ಅಲ್ಲದೇ ನಿಂತಿದ್ದ ಕಾರಿನಲ್ಲಿ ಮುಮ್ತಾಜ್ ಅಲಿ ಇರಲಿಲ್ಲ.
ಸೇತುವೆಯಲ್ಲಿ ಕಾರು ನಿಂತಿದ್ದ ಹಿನ್ನಲೆಯಲ್ಲಿ ಒಂದೋ ಕಾರು ನಿಲ್ಲಿಸಿ ಆಲಿಯವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥಾವ ಯಾರದ್ರೂ ಕಾರಿಗೆ ಢಿಕ್ಕಿ ಹೊಡೆದು ತಡೆದು ಅಪಹರಿಸಿರಬಹುದು ಅಥಾವ ನದಿಗೆ ಎಸೆದಿರಬಹುದು ಎಂಬ ಪುಕಾರು ಹಬ್ಬಿತ್ತು
ಕಾರಿಗೆ ಬಸ್ಸು ಢಿಕ್ಕಿ
ಆದರೇ ಆ ಬಳಿಕ ಲಭಿಸಿದ ಮಾಹಿತಿ ಪ್ರಕಾರ , ಮುಮ್ತಾಜ್ ಅಲಿ ಅವರು ಚಲಾಯಿಸುತ್ತಿದ್ದ ಕಾರು ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕೂಳೂರಿನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೈಕಂಪಾಡಿಯಲ್ಲಿ ಖಾಸಗಿ ಬಸ್ಗೆ (ಮಹೇಶ್) ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಕಾರಿನ ನಂಬರ್ ಪ್ಲೇಟ್ ಅಲ್ಲೇ ಕಳಚಿಬಿದ್ದಿತ್ತು. ಅಪಘಾತದ ಸಂಭವಿಸಿದ ಬಳಿಕವೂ ಮಮ್ತಾಜ್ ಅಲಿ ಅವರು ಕಾರನ್ನು ನಿಲ್ಲಿಸದೇ ಸಾಗಿದ್ದರು ಎಂದು ಆ ಬಸ್ನ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅವರ ಕಾರು ಮುಂಜಾನೆ 4.40ರ ಸುಮಾರಿಗೆ ಕೂಳೂರು ಸೇತುವೆಯತ್ತ ಸಾಗಿದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಮುಂಜಾನೆ 5.09ರ ಸುಮಾರಿಗೆ ಅವರ ಮಗಳು ಕೂಳೂರು ಸೇತುವೆಯಲ್ಲಿ ಅವರ ಕಾರು ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ 4.40 ಮತ್ತು 5.09ರ ನಡುವೆ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆತ್ಮಹತ್ಯೆ ಅನುಮಾನ !!!
ಉಡುಪಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ನೀರಿಗಳಿದು ಆಲಿಗಾಗಿ ನದಿಯಲ್ಲಿ ಶೋಧ ನಡೆಸಿದ್ದಾರೆ. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು “, ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ, ಆದರೆ ಎಲ್ಲೂ ಕೂಡ ಪತ್ತೆಯಾಗಿಲ್ಲ. ಸದ್ಯಕ್ಕೆ 100 ಮೀಟರ್ ಸುತ್ತುತ್ತಾ ಹುಡುಕಾಟ ನಡೆಸಲಾಗಿದೆ. ಸೇತುವೆ ಆಳಕ್ಕೆ ಇಳಿದು ಹುಡುಕಾಟ ನಡೆಸಿದ್ದೇವೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಕೆಳಗೆ ಕತ್ತಲೆ ಇರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ . ಬಿದ್ದಿದ್ದರೆ ಇಲ್ಲೇ ಸಿಗಬೇಕು, ಇಷ್ಟು ಬೇಗ ಸಮುದ್ರ ಸೇರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರು ನದಿಗೆ ಹಾರಿರುವ ಸಾಧ್ಯತೆಯೂ ಕ್ಷೀಣಿಸಿದೆ.
ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೇ ಮುಮ್ತಾಜ್ ?
ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾದಾಗ ಮೂಡಿದ ಅನುಮಾನಗಳು, ಅಪಘಾತದ ನೈಜ ಕಾರಣ ಗೊತ್ತಾದ ಬಳಿಕ ತಿಳಿಯಾಗಿತ್ತು. ಹೀಗಾಗಿ ಆಲಿಯವರು ನಾಪತ್ತೆಯಾಗಲು ಇರಬಹುದಾದ ಬೇರೆ ಕಾರಣಗಳ ಬಗ್ಗೆ ಪೊಲೀಸರು ಶೋಧಿಸಲು ಆರಂಭಿಸಿದ್ದು, ಇದೆ ವೇಳೆ ಆಲಿಯವರನ್ನು ಕೃಷ್ಣಾಪುರದ ಯುವತಿ ಯೊಬ್ಬರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂಬ ಬಗ್ಗೆ ವದಂತಿಗಳು ಹಬ್ಬಿದೆ. ಆಕೆ ಒಂದೋ 5 ಕೋಟಿ ಹಣ ನೀಡಬೇಕು ಇಲ್ಲ ಮದುವೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ಮುಮ್ತಾಜ್ ಅವರ ಮನೆಯಲ್ಲಿಯೂ ಗೊತ್ತಾಗಿ ರಾದ್ದಾಂತ ಆಗಿತ್ತು ಎಂದು ಹೇಳಲಾಗುತ್ತಿದೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವತಿಯ ಜತೆಗೆ , ಮಸೀದಿಯ ಕಾರಣಕ್ಕೆ ಮುಮ್ತಾಜ್ ಬಳಿ ದ್ವೇಷ ಹೊಂದಿದ್ದ ಮೂವರು ಯುವಕರು ಸೇರಿಕೊಂಡಿದ್ದರು ಎನ್ನಲಾಗಿದೆ.
ಯುವತಿಯ ಲಾಸ್ಟ್ ಲೊಕೇಷನ್ ಕೇರಳದಲ್ಲಿ: ಹೀಗಾಗಿ ಒಂದೆಡೆಯಿಂದ ಈ ಯುವತಿಯಿಂದ ಹಾಗೂ ಇನ್ನೊಂದೆಡೆ ಕೌಟುಂಬಿಕವಾಗಿ ಈ ವಿಚಾರವಾಗಿ ಒತ್ತಡ ಅನುಭವಿಸುತ್ತಿದ್ದ ಮುಮ್ತಾಜ್ ಆತ್ಮಹತ್ಯೆ ಮೊರೆ ಹೋದರೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾದ ಯುವತಿ ಕೂಡ ಭಾನುವಾರದಿಂದ ನಾಪತ್ತೆಯಾಗಿದ್ದು, ಆಕೆಯ ಮೊಬೈಲಿನ ಲಾಸ್ಟ್ ಲೊಕೇಶನ್ ಕೇರಳದಲ್ಲಿ ಕಂಡು ಬಂದಿದೆ ಬಳಿಕ ಆಕೆಯ ಮೊಬೈಲ್ ಸ್ವಿಚ್ಡ್ ಆಪ್ ಆಗಿದೆ. ಇನ್ನು ಆಕೆಗೆ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿರುವ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಯಾರು ಈ ಮುಮ್ತಾಜ್ ? : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಎಂ.ಫಾರೂಕ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಅವರು ಮುಮ್ತಾಜ್ ಅಲಿ ಅವರ ಅಣ್ಣಂದಿರು. ಮುಮ್ತಾಜ್ ಅಲಿ ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಮಗ ಹಾಗೂ ಪತ್ನಿ ಇದ್ದಾರೆ.
ಮುಸ್ಲಿ ಸಮುದಾಯದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಮುಮ್ತಾಜ್ ಅಲಿ ಹಲವಾರು ಮುಸ್ಲಿಂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಉದ್ಯಮಿಯೂ ಆಗಿದ್ದ ಅವರು ಬೈಕಂಪಾಡಿಯಲ್ಲಿ ಮಂಗಳೂರು ‘ಲೈಮ್ ಆಯಂಡ್ ಮೆರೈನ್ ಇಂಡಸ್ಟ್ರೀಸ್’ ಕಂಪನಿಯ ಆಡಳಿತ ಪಾಲುಗಾರರು. ಮುಮ್ತಾಜ್ ಟ್ರೇಡರ್ಸ್ನ ಮಾಲೀಕರು. ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ಜಮಾತ್ನ ಅಧ್ಯಕ್ಷ. ಕೃಷ್ಣಾಪುರದ ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ. ಕಾಟಿಪಳ್ಳದ ಮಿಸ್ಬಾ ಸಂಸ್ಥೆಗಳ ಸಮೂಹದ ಅಧ್ಯಕ್ಷ, ಕರ್ನಾಟಕ ಮುಸ್ಲಿಂ ಜಮಾತ್ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು


