ಫಿಲೋಮಿನಾದಲ್ಲಿ ಅಂತರಾಷ್ಟ್ರೀಯ ಸಂಗೀತ ದಿನ ಆಚರಣೆ.

ಫಿಲೋಮಿನಾದಲ್ಲಿ ಅಂತರಾಷ್ಟ್ರೀಯ ಸಂಗೀತ ದಿನ ಆಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜ (ಸ್ವಾಯತ್ತ),ಯಕ್ಷಕಲಾ ಕೇಂದ್ರ ಮತ್ತು ಲಲಿತ ಕಲಾ ಸಂಘದ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಂಗೀತ ದಿನದ ಪ್ರಯುಕ್ತ “ಫಿಲೋ ನಿನಾದ” ಕಾರ್ಯಕ್ರಮವನ್ನು ಮಂಗಳವಾರದಂದು ಪಿ.ಜಿ ಸೆಮಿನಾರ್ ಹಾಲ್ ನಲ್ಲಿ ಸಂಯೋಜಿಸಲಾಯಿತು.ಸಂಗೀತದ ರಸಾನುಭೂತಿಯನ್ನು ಸೃಷ್ಟಿಸುವ ಅಪೂರ್ವ ಪ್ರಸ್ತುತಿಯನ್ನು ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿ ಕಲಾವಿದರು ನಡೆಸಿಕೊಟ್ಟರು.

ಫಿಲೋ ನಿನಾದದ ಅತಿಥಿಗಳಾಗಿ ತಬಲಾ ವಾದಕ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಮನ್ ದೇವಾಡಿಗ ಹಾಗೂ ಕೊಳಲು ವಾದಕ ಕೃಷ್ಣ ಗೋಪಾಲ್ ರವರು ಭಾಗವಹಿಸಿದರು.

ಸುಮನ್ ದೇವಾಡಿಗರವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಭೆಯನ್ನು ಬೆಳಗಿಸಲು ಸಂತಫಿಲೋಮಿನಾ ಕಾಲೇಜು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ ಾಂಶುಪಾಲರಾದ ರೆ|ಡಾ|ಅಂಟನಿ ಪ್ರಕಾಶ್ ಮೊಂತೆರೋರವರು ಸಂಗೀತವು ಮನಸ್ಸಿಗೆ ಧನಾತ್ಮಕ ಪ್ರೇರಣೆಯನ್ನು ನೀಡುತ್ತದೆ ಸಂಗೀತದಿಂದ ವಿಶೇಷ ಅನುಭೂತಿಯನ್ನು ಪಡೆಯಲು ಸಾಧ್ಯವೆಂದು ತಿಳಿಸಿದರು.ಲಲಿತ ಕಲೆಗಳಲ್ಲಿ ಅಭಿರುಚಿಯನ್ನು ಮೂಡಿಸುವ ಪ್ರಯತ್ನ ಮಾಡುವಂತೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಡಾ|ವಿಜಯಕುಮಾರ್ ಮೊಳೆಯಾರ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಕಲಾವಿದರಿಂದ ಫಿಲೋ ನಿನಾದ’ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.

ಯಕ್ಷಕಲಾ ಕೇಂದ್ರ ನಿರ್ದೇಶಕ ಪ್ರಶಾಂತ ರೈ ಮುಂಡಾಳಗುತ್ತು ರಚಿಸಿ,ರ ಗ ಸಂಯೋಜಿಸಿದ ಹಾಡುಗಳ ಪ್ರಸ್ತುತಿ ಅಪೂರ್ವವಾಗಿ ಸಂಪನ್ನಗೊಂಡಿತು.ತಬಲಾದಲ್ಲಿ ಸುಮನ್ ದೇವಾಡಿಗ ಮತ್ತು ಕೊಳಲಿನಲ್ಲಿ ಕೃಷ್ಣಗೋಪಾಲ್ ಸಹಕರಿಸಿದರು.
ಶ್ರೀ ಪ್ರಶಾಂತ ರೈ ಮುಂಡಾಳಗುತ್ತು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?