ದಾಂಡೇಲಿ : ಗಂಡ ಹೆಂಡತಿ ಜಗಳದಲ್ಲಿ ಮೂಕ ಮಗುವನ್ನು ಮೊಸಳೆ ಇರುವ ಕಾಲುವೆಗೆ ಎಸೆದ ತಾಯಿ.

ದಾಂಡೇಲಿ : ಗಂಡ ಹೆಂಡತಿ ಜಗಳ ಕೂಸು ಬಡವಾಯಿತೆಂಬ ಗಾದೆ ಮಾತು ನಿಜವಾಯಿತು ಇಂತಹ ವಿದ್ರಾಹಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ಘಟನೆ ನಡೆದಿದೆ.

ಗಂಡನ ಜೊತೆಗಿನ ಜಗಳದಿಂದ ಸಿಟ್ಟಿಗೆದ್ದ ಹೆಂಡತಿ ತಾನು ಹೆತ್ತ ಮಗುವನ್ನ ನಾಲೆಗೆ ಎಸೆದ ಘಟನೆ ಹಾಲಮಡ್ಡಿಯಲ್ಲಿ ನಡೆದಿದೆ.ಸಾವಿತ್ರಿ ಎಂಬಾಕೆ ತನ್ನ ಆರು ವರ್ಷದ ಮಗನನ್ನು ನಾಲೆಗೆ ಎಸೆದಿದ್ದಾಳೆ. ವಿನೋದ್ (6) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ಪರಸ್ಪರ ಜಗಳ‌ ಮಾಡಿಕೊಂಡಿದ್ದಾರೆ. ಜಗಳದಿಂದ ಮಾನಸಿಕವಾಗಿ‌ ನೊಂದ ಸಾವಿತ್ರಿ 6 ವರ್ಷದ ಮಾತು ಬಾರದ ಮಗು ವಿನೋದ್​​ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲೆಗೆ ಎಸೆದು ಬಂದಿದ್ದಾಳೆ.ಗಂಡ ರವಿಕುಮಾರ್ ದಿನನಿತ್ಯ ಕುಡಿಯುತ್ತಿದ್ದು ಹೆಂಡತಿ ಬಳಿ ಜಗಳ ಮಾಡುತ್ತಿದ್ದನು. ನಿನ್ನೆ ಕೂಡ ಸಾವಿತ್ರಿ ಬಳಿ ಜಗಳ ಮಾಡಿದ್ದಾನೆ. ಪ್ರತಿ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದನಂತೆ. ನಿನ್ನೆ ಜಗಳ ತಾರಕಕ್ಕೇರಿದ್ದು ಕೋಪದಲ್ಲಿ ಮಗುವನ್ನ ತಾಯಿ ನಾಲೆಗೆ ಎಸೆದು ಬಂದಿದ್ದಾಳೆ.

ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದ್ದು, ಮಗುವಿನ ಶೋಧ ಕಾರ್ಯ ರಾತ್ರಿಯಿಂದ ಮುಂದುವರೆದಿತ್ತು. ಅದರೆ ಎಲ್ಲೂ ಮಗು ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮಗುವಿನ ಮೃತದೇಹ ಸಿಕ್ಕಿದೆ. ಮೊಸಳೆಯ ಬಾಯಿಯಲ್ಲಿ ಕಾಣಿಸಿಕೊಂಡ ಮಗುವಿನ ಮೃತದೇಹವನ್ನು ಅಗ್ನಿಶಾಮಕ ದಳದವರು ಹೊರತೆಗೆದಿದ್ದಾರೆ.

News Editor

Learn More →

Leave a Reply

Your email address will not be published. Required fields are marked *