ಕೋಟ: ಬೈಕ್ ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಸಾವು

ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಬೈಕ್ ಪಲ್ಟಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಸಮೀಪ ಸಂಭವಿಸಿದೆ.

ಮೃತಪಟ್ಟ ಯುವಕ ಕೋಟ ಮಣೂರು ಸುರೇಶ್ ಆಚಾರ್ಯ  ಅವರ ಮಗ ವಿಕಾಸ್ ಆಚಾರ್ಯ (22) ಎಂದು ತಿಳಿಯಲಾಗಿದೆ.

ಬೈಕ್ ಸವಾರ ರಾತ್ರಿ 1:30 ರ ಸುಮಾರಿಗೆ ಸಾಸ್ತಾನ ದಿಂದ ಕೋಟ ಮಣೂರು ಕಡೆ ಬರುತ್ತಿದ್ದ ವೇಳೆ  ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್  ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

ಅಪಘಾತ ನಡೆದ ತಕ್ಷಣ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ರವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಸಾಗಿಸಿರುತ್ತಾರೆ.

News Editor

Learn More →

Leave a Reply

Your email address will not be published. Required fields are marked *