ಬೆಂಗಳೂರು : ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಯುವತಿ : ಯಾಕ್ರೀ ಇಷ್ಟು ವೇಗವಾಗಿ ಹೋಗ್ತೀರಾ ಎಂದು ಪ್ರಶ್ನಿಸಿದಕ್ಕೆ ಆಟೋ ಡ್ರೈವರ್ ಮೇಲೆ ಹಲ್ಲೆ.

ಬೆಂಗಳೂರು : ಯುವತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದಲ್ಲದೆ ಇವಳ ಉಗ್ರರೂಪದ ಚಾಲನೆಗೆ ಪ್ರಶ್ನಿಸಿದ ಆಟೋ ಚಾಲಕನಿಗೆ ಹಿಗ್ಗಾ ಮುಗ್ಗ ಹಲ್ಲೆನಡಿಸಿದ ಘಟನೆ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಯುವತಿ ಕಂಠ ಪೂರ್ತಿ ಕುಡಿದು ನಿಲ್ಲಾಗದಂತಹ ಸ್ಥಿತಿಯಲ್ಲಿದ್ದು ರಸ್ತೆ ಮಧ್ಯೆ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ ಆಟೋ ಡ್ರೈವರ್​ ನಿಶಾಂತ್​ಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಅಷ್ಟೇ ಅಲ್ಲದೆ ಕಾರ್ ನಿಲ್ಲಿಸಿ ಅಟೋ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ.

ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಸಾಲದಕ್ಕೆ ಯುವಕನ ಮೈ-ಕೈ ಪರಚಿ ಯುವತಿ ಗಾಯಗೊಳಿಸಿದ್ದಾಳೆ. ರಸ್ತೆಯಲ್ಲಿ ಯುವಕನ ಕೋಲಾರ್ ಹಿಡಿದು ಥಳಿಸಿ ಅಹಂಕಾರ ಮೆರೆದಿದ್ದಾಳೆ .ಬಳಿಕ ಯುವಕ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಳೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಯುವತಿಯ ಮೇಲೆ ಯಾವ ರೀತಿ ಕ್ರಮ ಕೈಗೊಂಡರೆಂದು ಕಾದುನೋಡಬೇಕಾಗಿದೆ.

ಬೆಂಗಳೂರಿನಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಹೈಫೈ ಸೊಸೈಟಿಯ ಯುವಕ/ಯುವತಿಯರು ಕಂಠಪೂರ್ತಿ ಕುಡಿದು ರಸ್ತೆಗೆ ಬಂದು ಅಡ್ಡಾದಿಡ್ಡಿ ಕಾರು- ಬೈಕು ಚಲಾಯಿಸುತ್ತ ನ್ಯೂಸೆನ್ಸ್‌ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫ್ಯಾಶನ್‌ ಡಿಸೈನರ್‌ ಪ್ರಸಾದ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಇದೇ ರೀತಿ ಡ್ರಾಮಾ ಸೃಷ್ಟಿಸಿ ಸುದ್ದಿಯಾಗಿದ್ದ.ಒಟ್ಟಾರೆ ಇಂತಹ ವೇಷದಾರಿಗಳಿಂದ ಪೊಲೀಸರಿಗೆ ನಿದ್ರೆಯಿಲ್ಲದಂತಾಗಿದೆ.

News Editor

Learn More →

Leave a Reply

Your email address will not be published. Required fields are marked *