ಮಲ್ಪೆ: ಉಡುಪಿ ನಗರದ ಮಲ್ಪೆ ಸಮೀಪ ಕಳ್ಳನೊಬ್ಬ ಹೊಂಚು ಹಾಕಿ ಸ್ಕೂಟರ್‌ನ ಒಳಗೆ ಇಟ್ಟಿದ್ದ 1.5 ಲಕ್ಷ ರೂ. ನಗದನ್ನು ಎಗರಿಸಿರುವ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸಂಭವಿಸಿದೆ.
ಶ್ರೀಕಾರ್ ಬೋಟಿನ ರೈಟರ್ ಆಗಿದ್ದ ಶಮಿತ್ ಅವರು ಮೀನು ಮಾರಾಟದ ಬಿಲ್ಲಿನ 1.5 ಲಕ್ಷ ರೂ. ಹಣವನ್ನು ಪೌಚ್‌ನಲ್ಲಿ ಹಾಕಿ ಸ್ಕೂಟರ್‌ನ ಢಿಕ್ಕಿಯಲ್ಲಿಟ್ಟು ಬೀಗ ಹಾಕಿ ಇನ್ನೊಂದು ಮೀನು ಪಾರ್ಟಿ ಕಚೇರಿಗೆ ಹೋಗಿದ್ದರು. ಅಲ್ಲಿಂದ ಮರಳಿ ಬಂದು ಪರಿಶೀಲಿಸಿದಾಗ ಢಿಕ್ಕಿಯಲ್ಲಿದ್ದ ಹಣದ ಪೌಚ್ ಇರಲಿಲ್ಲ.
ಪಕ್ಕದ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸ್ಕೂಟರಿನ ಸೀಟ್ ಅನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಪಕ್ಕದ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸ್ಕೂಟರಿನ ಸೀಟ್ ಅನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.