ಮಂಜೇಶ್ವರದ ಮಾಡದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ವರಿಂದ ಲೋಕಾರ್ಪಣೆ.

ಮಂಜೇಶ್ವರದ ಮಾಡದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ವರಿಂದ ಲೋಕಾರ್ಪಣೆ.


ಮಂಜೇಶ್ವರ: ಮಂಜೇಶ್ವರ ಮಾಡ ಕ್ಷೇತ್ರದ ಬಳಿ ಶ್ರೀ ಸುರೇಂದ್ರ ಕೋಟ್ಯಾನ್ ರವರ ಮನದಾಳದ ಹಂಬಲದಂತೆ ಅವರು ಸ್ವತಃ ತನ್ನ ಅಂಗಡಿಯ ಒಂದು ಭಾಗದಲ್ಲಿ ಗ್ರಂಥಾಲಯ ತೆರೆದು , ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗ್ರಂಥಾಲಯದ ಉದ್ಘಾಟನೆಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ನೆರವೇರಿಸಿದರು. ಬಳಿಕ ಮಾತನಾಡಿದ ಹಾಜಬ್ಬರವರು ಸುರೇಂದ್ರ ಕೋಟ್ಯಾನ್ ರವರು ತನ್ನ ದುಡಿಮೆಯ ಒಂದು ಪಾಲನ್ನು ಗ್ರಂಥಾಲಯಕ್ಕೆ ಬೇಕಾಗಿ ಮೀಸಲಿರಿಸಿದ್ದನ್ನು ಶ್ಲಾಘಿಸಿದರು. ಕಾರ್ಯಕ್ರಮವ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲವಿನಾ ಮೊಂತೆರೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಪ್ರಸಾದ್ ಪಾಣೂರು , ನಿವೃತ್ತ ಉಪನ್ಯಾಸಕಿಯರಾದ ಡಾ. ಯು ಮಹೇಶ್ವರಿ, ಮಹಾಲಿಂಗೇಶ್ವರ ರಾಜ್ ಡಿ, ಪಂಚಾಯತು ಸದಸ್ಯರುಗಳಾದ ಅಬ್ದುಲ್ ರಹಿಮಾನ್ , ಶ್ರೀ ಲಕ್ಷ್ಮಣ ಮಂಜೇಶ್ವರ, ರಘು ಶೆಟ್ಟಿ, ವಾಮಯ ಅಂಬಿತ್ತಾಡಿ, ಗೋಪಾಲ ಶೆಟ್ಟಿ ಅರಿಬೈಲ್, ಹರೀಶ್ ಶೆಟ್ಟಿ ಮಾಡ, ತಾರನಾಥ್ ವರ್ಕಾಡಿ, ಹರಿಶ್ವಂದ್ರ ಮಂಜೇಶ್ವರ, ಕುಶಲಾಕ್ಷಿ ಕಣ್ವತೀಥ೯ ಮೊದಲಾದವರು ಉಪಸ್ಥಿತರಿದ್ದರು. ತಾರನಾಥ್ ಗಟ್ಟಿ ಕಾಪಿಕ್ಕಾಡ್ ಪ್ರಾಸ್ತವಿಕ ಮಾತುಗಳನ್ನು ಆಡಿದರು. ವಿಜಯ ಕುಮಾರ್ ಪಾವಲ ಅತಿಥಿಗಳನ್ನು ಸ್ವಾಗತಿಸಿದರು.. ಸುರೇಂದ್ರ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಶ್ರೀ ರಾಜೇಶ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!