ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ.

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಪ್ರತಿಪಕ್ಷಗಳ ಆರೋಪದ ನಡುವೆ ಸರ್ಕಾರ 34 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.

ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಸೇರಿದಂತೆ 34 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.‌

ಮಂಗಳೂರು ನಗರ ಪೊಲೀಸ್ ಆಯುಕ್ತಲಾಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೊಯೆಲ್ ಅವರನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಿದೆ. ಅವರ ಸ್ಥಾನಕ್ಕೆ  ಜಿತೇಂದ್ರ ಕುಮಾರ್ ಅವರನ್ನು ನೇಮಿಸಲಾಗಿದೆ.

ವರ್ಗಾವಣೆಯಾಗಿರುವ ಅಧಿಕಾರಿಗಳ (ಹುದ್ದೆ) ವಿವರ ಇಲ್ಲಿದೆ..

ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ

ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ

ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ

ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ

ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ

ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ

ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್​ಪಿ, ಬೆಂಗಳೂರು

ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ

ಸೈದಲು ಅಡಾವತ್ – ಸಿಐಡಿ, ಎಸ್​​ಪಿ

ಅನಿತಾ.ಬಿ ಹದ್ದಣ್ಣನವರ್ – ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ

ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ

ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ

ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ

ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ

ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ

ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ

ಶಾಂತರಾಜು – ಎಸ್​​ಪಿ, ಗುಪ್ತಚರ ಇಲಾಖೆ

ಸಿರಿಗೌರಿ – ಎಸ್​​ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ

ಸುಮನ್.ಡಿ ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್

ಸಿಮಿ ಮರೀಯ ಜಾರ್ಜ್‌ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ

ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP

ಯಶೋಧ ವಟ್ಟಗೋಡಿ – ಎಸ್​ಪಿ, ಹಾವೇರಿ

ಗುಂಜನ್ ಅರ್ಯಾ – ಎಸ್​ಪಿ, ಧಾರವಾಡ

ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್​​ಎಸ್​ಎಲ್ ಬೆಂಗಳೂರು

ಸಿದ್ಧಾರ್ಥ್ ಗೋಯಲ್ – ಎಸ್​ಪಿ, ಬಾಗಲಕೋಟೆ

ರೋಹನ್ ಜಗದೀಶ್ – ಎಸ್​ಪಿ, ಗದಗ

ಶಿವಾಂಶು ರಜಪೂತ – ಎಸ್​ಪಿ, ಕೆಜಿಎಫ್

ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ

ಎಂ.ಎನ್​​.ದೀಪನ್ – ಎಸ್​ಪಿ, ಉತ್ತರ ಕನ್ನಡ

ಎಸ್​.ಜಾನವಿ – ಎಸ್​ಪಿ, ವಿಜಯನಗರ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾದ ಸಂದರ್ಭದಲ್ಲಿ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಇದೀಗ ಪೊಲೀಸ್‌ ಇಲಾಖೆಗೆ ದೊಡ್ಡಮಟ್ಟದ ಸರ್ಜರಿಯನ್ನು ಮಾಡಲಾಗಿದೆ.

ಜೈಲಿನಲ್ಲಿ ಅಕ್ರಮ ಸೇರಿದಂತೆ ವಿವಿಧ ಸರಣಿ ಅಕ್ರಮಗಳು ರಾಜ್ಯದಲ್ಲಿ ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿರಾಜ್ಯದಲ್ಲಿ ಕಾನೂನು ಪಾಲನೆ ಸರಿಯಾಗಿ ಆಗುತ್ತಿಲ್ಲವೆಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು

News Editor

Learn More →

Leave a Reply

Your email address will not be published. Required fields are marked *