
ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ; ರಸ್ತೆ ನಿರ್ಮಾಣಕ್ಕೆ ಒತ್ತಾಯ
ರಸ್ತೆ ಸಂಪರ್ಕವಿಲ್ಲದೆ 102 ವರ್ಷ ಕಳೆದ ಪುತ್ತೂರಿನ ಇರ್ದೆ ದೂಮಡ್ಕದ ಗ್ರಾಮಸ್ಥರು!!
ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ; ರಸ್ತೆ ನಿರ್ಮಾಣಕ್ಕೆ ಒತ್ತಾಯ
ಕಂದಾಯ ಇಲಾಖೆ, ಪೊಲೀಸರಿಂದ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ
ಪ್ರತಿಭಟನೆಯ ಕಿಚ್ಚಿಗೆ ಕೊನೆಗೂ ರಸ್ತೆ ನಿರ್ಮಾಣಕ್ಕೆ ಅಸ್ತು
ನಾಳೆ ಸರ್ವೇ ಕಾರ್ಯ, ಜೆಸಿಬಿ ಮೂಲಕ ರಸ್ತೆ ನಿರ್ಮಾಣ

Anchor: ಪುತ್ತೂರು ತಾಲೂಕಿನ ಇರ್ದೆ ದೂಮಡ್ಕದ ಸುಮಾರು 13 ಪರಿಶಿಷ್ಟ ಪಂಗಡದ ಮನೆಯವರಿಗೆ ರಸ್ತೆ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಇಂದು ರಸ್ತೆ ಸಂಪರ್ಕ ಮಾಡಿಕೊಡುವಂತೆ ಪ್ರತಿಭಟನೆ ನಡೆಸಿದ್ರು. ಇರ್ದೆ ಗ್ರಾಮದ ದೂಮಡ್ಕ-ಚಾಕೋಟೆ- ಮದಕ ಪರಿಸರದ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೆ 102 ವರ್ಷಗಳು ಕಳೆದಿದೆ. ಹಾಗಾಗಿ ಇಂದು ರೊಚ್ಚಿಗೆದ್ದಿರುವ ಅಲ್ಲಿನ ಗ್ರಾಮಸ್ಥರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಸದಸ್ಯರೊಂದಿಗೆ ಸೇರಿ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಪಟ್ಟು ಹಿಡಿದ್ರು. ಈ ವೇಳೆ ಕೆಲಕಾಲ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ರಸ್ತೆ ಸಂಪರ್ಕಕ್ಕೆ ಬೇಕಿರುವ ಖಾಸಗಿ ಜಮೀನಿನ ಮಾಲೀಕರ ಜೊತೆಯೂ ಗ್ರಾಮಸ್ಥರು ವಾಗ್ವಾದ ನಡೆಸಿದ್ರು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತಲುಪುವ ವೇಳೆ ಪುತ್ತೂರು ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಜಂಬೂರಾಜ್ ಮಹಾಜನ್ ಆಗಮಿಸಿ ಕೆಲ ಹೊತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ರು. ಇದಕ್ಕೂ ಜಗ್ಗದ ಗ್ರಾಮಸ್ಥರು ಖಾಸಗಿ ಜಮೀನಿನ ಬೇಲಿ ತೆಗೆದು ರಸ್ತೆ ನಾವೇ ನಿರ್ಮಿಸಿಕೊಳ್ಳುತ್ತೇವೆ ಎಂದು ಆಕ್ರೋಶ ಹೊರಹಾಕಿದ್ರು. ಬಳಿಕ ಕಂದಾಯ ಇಲಾಖಾಧಿಕಾರಿಗಳು ಆಗಮಿಸಿ ಖಾಸಗಿ ಜಮೀನಿನ ಮಾಲೀಕರ ಮನವೊಲಿಸಿ 5×5 ಫೀಟ್ ನಂತೆ ರಸ್ತೆ ನಿರ್ಮಾಣ ಜಾಗ ಬಿಟ್ಟುಕೊಟ್ಟು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡ್ರು. ಇದಕ್ಕೆ ಖಾಸಗಿ ಜಮೀನಿನ ಮಾಲೀಕರು ಕೂಡ ತಮ್ಮ ಸ್ವಂತ ಜಮೀನನ್ನು ಯಾಕೆ ಬಿಟ್ಟುಕೊಡಬೇಕು ಎಂದು ಪ್ರಶ್ನೆ ಮಾಡಿದ್ರು. ಕೊನೆಗೆ ಕಂದಾಯ ಇಲಾಖಾಧಿಕಾರಿ ಖಾಸಗಿ ಜಮೀನಿನ ಮಾಲೀಕರನ್ನ ಮನವೊಲಿಸಿ ರಸ್ತೆ ನಿರ್ಮಾಣಕ್ಕೆ ಅಣುವು ಮಾಡಿಕೊಡಬೇಕು ಎಂದು ಕೇಳಿಕೊಂಡರು. ಮಾನವೀಯತೆ ದೃಷ್ಟಿಯಿಂದ 13 ಮನೆಯವರಿಗೆ ನೆರವಾಗಬೇಕು ಎಂದು ತಿಳಿಸಿದ್ರು. ಅದರಂತೆ ನಾಳೆ ಸರ್ವೇ ಕಾರ್ಯ ನೆರವೇರಲಿದ್ದು, ಜೆಸಿಬಿ ಮುಖಾಂತರ ರಸ್ತೆ ನಿರ್ಮಿಸುವ ಕಾರ್ಯನೆರವೇರಲಿದೆ.
ಗಿರಿಧರ್ ನಾಯ್ಕ್, ರಾಜ್ಯಾಧ್ಯಕ್ಷರು, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ.
ಇನ್ನು ಜನಪ್ರತಿನಿಧಿಗಳಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕವೂ ರಸ್ತೆ ನಿರ್ಮಾಣಕ್ಕಾಗಿ ಅಲ್ಲಿನ ಗ್ರಾಮಸ್ಥರು ಮನವಿ ಮಾಡಿ ಆಗಿದೆ. ಅದ್ರೆ ಯಾವುದೇ ಸ್ಪಂದನೆಯಿಲ್ಲ. ಹಾಗಾಗಿ ಮುಂದೆ ನಾವು ಪೇಪರ್ ವರ್ಕ್ ಮಾಡದೆ ನೇರ 15 ದಿನದೊಳಗೆ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ ಅವರು ತಿಳಿಸಿದ್ದರು. ಅದ್ರಂತೆ ಇಂದು ಗ್ರಾಮಸ್ಥರ ಜೊತೆಗೂಡಿ ಪ್ರತಿಭಟಿಸಿದರು.
ಪವಿತ್ರಾ,ಮಾಜಿ ಅಧ್ಯಕ್ಷೆ, ಇರ್ದೇ ಪಂಚಾಯತ್
ದೂಮಡ್ಕ – ಚಾಕೋಟೆ- ಮದಕ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಗೆ 90 ವರ್ಷಗಳ ಹಿಂದಿನಿಂದಲೇ ಪಂಚಾಯತ್ ಕಾಲು ದಾರಿ ಊರ್ಜಿತದಲ್ಲಿದೆ. ಸಂಪರ್ಕ ರಸ್ತೆಯಿಲ್ಲದೆ ಈ ಭಾಗದ ಜನರು ಅನಾರೋಗ್ಯ ಪೀಡಿತ ಸಂದರ್ಭದಲ್ಲಿ ಹೊತ್ತುಕೊಂಡು ಹೋಗುವಂತಹ ಅನಿವಾರ್ಯತೆ ಉಂಟಾಗಿದೆ. ಕಳೆದ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ಹಸುವೊಂದು ವೈದ್ಯರು ಕಾಲುದಾರಿಯಲ್ಲಿ ನಡೆದುಕೊಂಡು ಬರುವ ಸಂದರ್ಭ ತಡವಾದ್ದರಿಂದ ಹಸು ಮೃತಪಟ್ಟ ಘಟನೆಯೂ ನಡೆದಿದೆ. ವಿಧವೆಯೊಬ್ಬರ ಮನೆ ಕುಸಿದು ಬಿದ್ದಾಗ ಮನೆಯ ಸಂಪೂರ್ಣ ಹಾನಿಯಾಗಿದೆ. ಅವರಿಗೆ ಮನೆ ಪುನಃನಿರ್ಮಾಣ ಮಾಡಲು ಲಕ್ಷಾಂತರ ರೂಪಾಯಿ ಖರ್ಚಾಗುವ ಸಂದರ್ಭ ಸರಕಾರದ ಪರಿಹಾರ ಕೇವಲ 10ಸಾವಿರ ಸಿಕ್ಕಿದೆ. ರಸ್ತೆ ನಿರ್ಮಾಣ ಮಾಡಬಾರದೆಂದು ಸ್ಥಳೀಯರೊಬ್ಬರು ದಾರಿಯನ್ನು ಕಿರಿದುಗೊಳಿಸಿದ್ದಾರೆ. ಸಂಪರ್ಕ ದಾರಿಯಲ್ಲಿ ಅನಗತ್ಯವಾಗಿ ದುರುದ್ದೇಶದಿಂದ ಗುಡಿಸಲು ನಿರ್ಮಿಸಿ ದಾರಿಯನ್ನು ಮುಚ್ಚಿದ್ದಾರೆ. ಒಟ್ಟಾರೆಯಾಗಿ ಮೂಲ ಸೌಕರ್ಯದಿಂದ ವಂಚಿತರಾದ ಮನೆಗಳಿಗೆ ಸಂಪರ್ಕ ರಸ್ತೆ ಮಾಡಲು ಶಾಸಕರಿಗೆ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಇಂದು ಗ್ರಾಮಸ್ಥರೇ ಬೀದಿಗಿಳಿದು ರಸ್ತೆ ಸಂಪರ್ಕ ಕಲ್ಪಿಸುವಂತೆ ಬೀದಿಗಿಳಿದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಚುನಾವಣೆ ಸಂದರ್ಭ ಕಾಲೋನಿಗೆ ಭೇಟಿ ನೀಡಿ ಕಾಲೋನಿಯವರ ಬೇಡಿಕೆಯಂತೆ ನಾನು ಶಾಸಕನಾದ ಎರಡು ದಿನದಲ್ಲಿ ಸಂಪರ್ಕ ರಸ್ತೆ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಎರಡೂವರೆ ವರ್ಷ ಆದರೂ ಅವರ ಭರವಸೆ ಈಡೇರಿಲ್ಲ. ಅವರ ಕಡೆಯಿಂದ ರಸ್ತೆಗೆ ಸಂಬಂಧಿಸಿ ಫೈಲ್ ಪಂಚಾಯತ್ಗೆ ಹೋಗಿದ್ದು, ಅಲ್ಲಿಂದ ಅದು ಪಟ್ಟಸ್ಥಳ ಎಂದು ಪೆಂಡಿಂಗ್ನಲ್ಲಿದೆ ಎಂದು ತಿಳಿದು ಬಂದಿದೆ. ಶಾಸಕರು ಪಟ್ಟಸ್ಥಳ ಅವರ ಹೆಸರಿಗೆ ಆದದ್ದು ಹೇಗೆ ಎಂಬುದನ್ನು ತಿಳಿಯುವ ಕೆಲಸ ಮಾಡಬೇಕಾಗಿತ್ತು ಎಂದು ಈ ಸಂದರ್ಭದಲ್ಲಿ ಗಿರಿಧರ ನಾಯ್ಕ ಅವರು ಹೇಳಿದರು.


